MGT ದಮ್ಮಾಮ್ - ಖೋಬರ್ ಘಟಕದ ವಾರ್ಷಿಕ ಮಹಾಸಭೆ

Update: 2023-12-29 11:17 GMT

ಅಲ್ ಖೋಬರ್: ಮಲ್ನಾಡ್ ಗಲ್ಫ್ ಕಲ್ಚರಲ್ ಮತ್ತು ಸ್ಪೋರ್ಟ್ಸ್ ಅಸೋಸಿಯೇಷನ್ (ರಿ) ಇದರ ದಮ್ಮಾಮ್ - ಖೋಬರ್ ಘಟಕದ ವಾರ್ಷಿಕ ಮಹಾಸಭೆಯು ಖೋಬರ್ ನ ಅಪ್ಸರಾ ಹೋಟೆಲ್ ನಲ್ಲಿ ನಡೆಯಿತು.

ಝೈನುಲ್ ಆಬಿದೀನ್ ಝುಹ್ರಿ ಉಸ್ತಾದರು ದುಆ, ಆಶೀರ್ವಚನ ನೀಡಿ ಸಂಘಟನೆಯ ಬೆಳವಣಿಗೆಯನ್ನು ಮತ್ತು ಚಟುವಟಿಕೆಗಳನ್ನು ಶ್ಲಾಘಿಸಿ ದಮ್ಮಾಮ್ ಘಟಕವು ಇನ್ನಷ್ಟು ಚುರುಕಾಗಿ ಕೆಲಸ ಮಾಡಲು ಕರೆ ನೀಡಿದರು.

ಎಂ.ಜಿ.ಟಿ ಯುವ ಸದಸ್ಯ ಮಾಸ್ಟರ್ ಹುಝಯ್ಫ್ ಬಿನ್ ಅಲಿ ಚಿಕ್ಕಮಗಳೂರು ಖಿರಾತ್ ಪಠಿಸಿದರು.

ಸಭೆಯನ್ನು ನಿರೂಪಿಸಿದ ಶಫಿವುಲ್ಲಾ ಚಿಕ್ಕಮಗಳೂರು, ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಸಮುದಾಯದ ಶೈಕ್ಷಣಿಕ, ಉದ್ಯೋಗಾವಕಾಶಗಳು ಮತ್ತು ಉದ್ಯೋಗವಂಚಿತರ ಬಗ್ಗೆ ವಿವರಿಸಿದರು. ಈ ಎಲ್ಲಾ ಕಾರ್ಯಗಳಿಗೆ ಪೂರಕವಾಗಿ MGT ಸಮುದಾಯಕ್ಕೆ ನೀಡುತ್ತಿರುವ ಕೊಡುಗೆಯನ್ನು ತಿಳಿಸಿದರು.

ಅಫ್ಝಲ್ ಕೊಪ್ಪ ಸ್ವಾಗತಿಸಿದರು. ವಾರ್ಷಿಕ ವರದಿ ಮತ್ತು ಲೆಕ್ಕಾಚಾರ ಮಂಡಿಸಿದ ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಅಸ್ಗರ್ ತಲಗೂರು ಅವರು ತಮ್ಮ ಸುದೀರ್ಘ ಒಂಬತ್ತು ವರ್ಷಗಳ ಕಾರ್ಯದರ್ಶಿ ಕೆಲಸಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.

ಕೇಂದ್ರ ಸಮಿತಿಯ ಅಧ್ಯಕ್ಷ ಅಬ್ದುಲ್ ಸತ್ತಾರ್ ಜಯಪುರ ಮಾತನಾಡಿ, ಸಂಘಟನೆಯಲ್ಲಿ ಯುವಕರ ಪಾತ್ರ ,ಸಂಘಟನಾ ಶೈಲಿ ಮತ್ತು ಸಂಘಟನಾ ಕೆಲಸದಲ್ಲಿ ತಾಳ್ಮೆ ಮತ್ತು ಸಹನೆಯ ಪ್ರಾಮುಖ್ಯತೆಯನ್ನು ವಿವರಿಸಿದರು. ಸಂಸ್ಥೆಯ ಧ್ಯೇಯ ಮತ್ತು ದೂರ ದೃಷ್ಟಿಯ ಬಗ್ಗೆ ತಿಳಿಸಿ ತಾಯ್ನಾಡಿನಲ್ಲಿ ಖರೀದಿಸಿರುವ ಜಮೀನಿನ ವಿಚಾರದಲ್ಲಿ ಸಹಕರಿಸಲು ವಿನಂತಿಸಿದರು.

ನಿರ್ಗಮಿತ ಅಧ್ಯಕ್ಷ ಬಷೀರ್ ಬಾಳ್ಳುಪೇಟೆ ಅವರು ಮಾತನಾಡಿ, ಎಲ್ಲರ ಸಹಕಾರ ಮತ್ತು ಸದಸ್ಯರ ಸಮರ್ಪಣಾ ಮನೋಭಾವದ ಬಗ್ಗೆ ತಿಳಿಸಿ ಯುವಕರನ್ನು ಹುರಿದುಂಬಿಸಿದರು .

ಕೇಂದ್ರ ಸಮಿತಿಯ ಹಿರಿಯ ಸಲಹೆಗಾರ ಮತ್ತು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಫಾರೂಕ್ ಅರಬ್ ಎನೆರ್ಜಿ ಅವರು ಮಾತನಾಡಿ, ಎಲ್ಲ ಸ್ಥಾಪಕ ಮತ್ತು ಹಿರಿಯ ಸದಸ್ಯರುಗಳು ಸಂಘಟನೆಗಾಗಿ ನಡೆಸಿದ ತ್ಯಾಗ ಮತ್ತು ಕಠಿಣ ಪರಿಶ್ರಮವನ್ನು ಮೆಲುಕು ಹಾಕಿದರು . ಮುಂದೆ ಎಲ್ಲರೂ ಒಗ್ಗಟ್ಟಾಗಿ ಸಮುದಾಯಕ್ಕಾಗಿ ದುಡಿಯಲು ಕರೆ ನೀಡಿದರು.

ಸಭೆಯಲ್ಲಿ ಸಂಘಟನೆಯ ಬಗ್ಗೆ ವಿವರಿಸಿರುವ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅನ್ವರ್ ಬಾಳೆಹೊನ್ನೂರು -ದವಾ ಫಾರ್ಮಸಿ , ಮನ್ಸೂರ್ ಬೆಂಗಳೂರು ಮತ್ತು ಮುಶ್ರಫ್ ಅಹ್ಮದ್ ಹೊಸಪೇಟೆ ಸಭೆಯನ್ನುದ್ದೇಶಿಸಿ ಮಾತನಾಡಿದರು.

ನಂತರ ಅಬ್ದುಲ್ ಸತ್ತಾರ್ ಹಾಗೂ ಫಾರೂಕ್ ರವರು ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ಹೊಸ ಸಮಿತಿಯನ್ನು ರಚಿಸಿದರು.

ಗೌರವಾಧ್ಯಕ್ಷ: ಬಷೀರ್ ಬಾಳ್ಳುಪೇಟೆ

ಅಧ್ಯಕ್ಷ: ಸದಸ್ಯ ಅಫ್ಝಲ್ ಸಮದ್ ಕೊಪ್ಪ

ಪ್ರಧಾನ ಕಾರ್ಯದರ್ಶಿ: ಖಲಂದರ್ ಜಾವಗಲ್- ನೆಸ್ಮಾ

ಕೋಶಾಧಿಕಾರಿ: ಶಫೀಕ್ ಕೂರ್ಗ್

ಜೊತೆ ಕಾರ್ಯದರ್ಶಿಗಳು: ದರ್ವೇಶ್ ಮೊಹಮ್ಮದ್ ಹುಸೇನ್ –ಬಾಳೆಹೊನ್ನೂರು, ರಾಹಿಲ್ ಬಾಳೆಹೊನ್ನೂರು

ಶಿಕ್ಷಣ ಸಂಯೋಜಕರು: ರಮೀಝ್ ಬೇಲೂರು

ವೈದ್ಯಕೀಯ ಸಂಯೋಜಕರು:ಜಮೀರ್ ಬಾಳೆಹೊನ್ನೂರು

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಿದಾಯತ್ ಶಿವಮೊಗ್ಗ, ಇಲ್ಯಾಸ್ ಬಾಳ್ಳುಪೇಟೆ, ಶರೀಫ್ ಚಕ್ಕಮಕ್ಕಿ, ಶಫಿವುಲ್ಲಾ ಚಿಕ್ಕಮಗಳೂರು, ಅಲಿ ಅಕ್ಬರ್ ಚಿಕ್ಕಮಗಳೂರು, ಇಮ್ರಾನ್ ಹೊಸನಗರ, ಹಿದಾಯತುಲ್ಲಾ ಶಿವಮೊಗ್ಗ, ನೂರ್ ತೀರ್ಥಹಳ್ಳಿ, ಝಕೀರ್ ಹರಿಹರಪುರ, ಅಬ್ದುಲ್ ಸತ್ತಾರ್ ಜಯಪುರ, ಅಸ್ಗರ್ ತಳಗೂರು, ತೌಸೀಫ್ ತಳಗೂರು ಆಯ್ಕೆಯಾದರು.

ಹಿರಿಯ ಸಲಹೆಗಾರರಾಗಿ ಇಕ್ಬಾಲ್ ಬಾಳೆಹೊನ್ನೂರು, ಅಶ್ರಫ್ ಜೆ.ವಿ.ಸಿ- ಚಿಕ್ಕಮಗಳೂರು, ಹನೀಫ್ ಬಿಳಗುಳ, ಮನ್ಸೂರ್ ಬೆಂಗಳೂರು, ಉಪಾದ್ಯಕ್ಷರುಗಳು, ಬಷೀರ್ ಗುಡಿ ಚಿಕ್ಕಮಗಳೂರು, ಇಸ್ಮಾಯಿಲ್ ಬಾಳೆಹೊನ್ನೂರು ಇವರನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷ ಅಫ್ಝಲ್ ಸಮದ್ ಮಾತನಾಡಿ ಎಲ್ಲರ ಸಹಕಾರ ಕೋರಿದರು , ನೂತನ ಪ್ರಧಾನ ಕಾರ್ಯದರ್ಶಿ ಖಲಂದರ್ ಎಲ್ಲರಿಗೂ ಧನ್ಯವಾದ ಸಲ್ಲಿಸಿ ಮೂರು ಸ್ವಲಾತಿನೊಂದಿಗೆ ಸಭೆಯನ್ನು ಕೊನೆಗೊಳಿಸಲಾಯಿತು.

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News