ಅ.6ರಂದು ಬಹರೈನ್ ಕನ್ನಡ ಸಂಘದ ರೊನಾಲ್ಡ್ ಕೊಲಾಸೊ ಲಾಂಜ್ ಉದ್ಘಾಟನೆ

Update: 2023-10-04 17:42 GMT

ಮಂಗಳೂರು, ಅ.4: ಬಹರೈನ್ ಇಂಡಿಯನ್ ಕ್ಲಬ್ ಶತಮಾನೋತ್ಸವ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಡಾ. ರೊನಾಲ್ಡ್ ಕೊಲಾಸೊ ಅವರು ಬಹರೈನ್ ನಲ್ಲಿ ಮೊದಲ ಕನ್ನಡ ಭವನದ ನಿರ್ಮಾಣಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.

ಬಹರೈನ್ ಕನ್ನಡ ಭವನದಲ್ಲಿ ನೂತನವಾಗಿ ನಿರ್ಮಿಸಿರುವ ರೊನಾಲ್ಡ್ ಕುಲಾಸೊ ಲಾಂಜ್ ಉದ್ಘಾಟನಾ ಸಮಾರಂಭ ಅ. 6 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

ಕನ್ನಡ ಭವನದಲ್ಲಿನ ನೂತನ ರೊನಾಲ್ಡ್ ಕೊಲಾಸೊ ಲಾಂಜ್‌ನ್ನು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಉದ್ಘಾಟನೆ ಮಾಡಲಿದ್ದಾರೆ. ಸಂಜೆ 5 ಗಂಟೆಗೆ ಮೂವ್ ಎನ್ ಪಿಕ್ ಹೋಟೆಲ್‌ನಲ್ಲಿ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಹರೈನ್‌ನ ಭಾರತೀಯ ರಾಯಭಾರಿ ವಿನೋದ್ ಕೆ. ಜಾಕೊಬ್ ಮತ್ತು ಅತಿಥಿಯಾಗಿ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಭಾಗವಹಿಸಲಿರುವರು.

ಮಂಡ್ಯದ ಶಾಸಕ ರವಿ ಕುಮಾರ ಗೌಡ, ಎಐಸಿಸಿ ಕಾರ್ಯದರ್ಶಿ ಹಾಗೂ ಅನಿವಾಸಿ ಭಾರತೀಯ ಘಟಕದ ಮಾಜಿ ಉಪಾಧ್ಯಕ್ಷೆ ಡಾ.‌ ಆರತಿ ಕೃಷ್ಣ, ನಾಡಿನ ಖ್ಯಾತ ಉದ್ಯಮಿ ಹಾಗೂ ಸಮಾಜ ಸೇವಕ ಡಾ. ರೊನಾಲ್ಡ್ ಕೊಲಾಸೊ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಿಥುನ್ ರೈ ಪಾಲ್ಗೊಳ್ಳಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನೃತ್ಯಗಾರ ಸುಜಯ್ ಶಾನಭಾಗ್ ಮತ್ತು ತಂಡದಿಂದ ವಿವಿಧ ನೃತ್ಯ ಪ್ರದರ್ಶನಗಳು ನಡೆಯಲಿವೆ. ಸಂಘದ ಪ್ರತಿಭಾನ್ವಿತ ಕಲಾವಿದರಿಂದ ಪ್ರತಿಭೆ ಅನಾವರಣವಾಗಲಿದೆ ಎಂದು ಸಂಘದ ಅಧ್ಯಕ್ಷ ಅಮರನಾಥ್ ರೈ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News