ಎಸ್‌ಆರ್‌ಟಿಐಪಿ ನಿರ್ದೇಶಕರ ಮಂಡಳಿಗೆ ಕೆಇಎಫ್ ಹೋಲ್ಡಿಂಗ್ಸ್ ಅಧ್ಯಕ್ಷ ಫೈಝಲ್ ಇ.ಕೊಟ್ಟಿಕೊಲ್ಲನ್ ನೇಮಕ
ಶಾರ್ಜಾ: ಶಾರ್ಜಾ ರಿಸರ್ಚ್, ಟೆಕ್ನಾಲಜಿ ಮತ್ತು ಇನ್ನೋವೇಶನ್ ಪಾರ್ಕ್ (ಎಸ್‌ಆರ್‌ಟಿಐಪಿ) ನ ಪ್ರತಿಷ್ಠಿತ ನಿರ್ದೇಶಕರ ಮಂಡಳಿಗೆ ಕೆಇಎಫ್ ಹೋಲ್ಡಿಂಗ್ಸ್ ಸ್ಥಾಪಕ ಮತ್ತು ಅಧ್ಯಕ್ಷ ಫೈಝಲ್ ಇ.ಕೊಟ್ಟಿಕೊಲ್ಲನ್ ಅವರನ್ನು ನೇಮಕ ಮಾಡಲಾಗಿದೆ. ಈ ನೇಮಕಾತಿಯು ಕೆಇಎಫ್ ಹೋಲ್ಡಿಂಗ್ಸ್ ಗೆ ಮಹತ್ವದ ಮೈಲಿಗಲ್ಲಾಗಿದೆ. ಫೈಝಲ್ ಇ.ಕೊಟ್ಟಿಕೊಲ್ಲನ್ ರವರು ಶೇಖಾ ಬೊದೂರ್ ಬಿಂತ್ ಸುಲ್ತಾನ್ ಬಿನ್ ಮುಹಮ್ಮದ್ ಅಲ್ ಖಾಸಿಮಿ ನೇತೃತ್ವದಲ್ಲಿ SRTIP ಅಭಿವೃದ್ಧಿಗಾಗಿ ಮುಂದಡಿಯಿಟ್ಟಿದ್ದಾರೆ.
SRTIP ಅತ್ಯಾಧುನಿಕ ಸಂಶೋಧನೆ, ತಾಂತ್ರಿಕ ಪ್ರಗತಿಗಳು ಮತ್ತು ಪ್ರದೇಶದಲ್ಲಿನ ಹೊಸತನಕ್ಕಾಗಿರುವ ಪ್ರಮುಖ ಕೇಂದ್ರವಾಗಲು ಸಿದ್ಧವಾಗಿದೆ. ನಿರ್ದೇಶಕರ ಮಂಡಳಿಯಲ್ಲಿ ಫೈಝಲ್ ಕೊಟ್ಟಿಕೊಲ್ಲನ್ ಅವರನ್ನು ಸೇರ್ಪಡೆಗೊಳಿಸಿರುವುದು KEF ಹೋಲ್ಡಿಂಗ್ಸ್ ನ ಆಫ್‌ಸೈಟ್ ನಿರ್ಮಾಣ, ಆರೋಗ್ಯ, ಶಿಕ್ಷಣ ಮತ್ತು ಕ್ಲಿನಿಕಲ್ ವೆಲ್‌ನೆಸ್ ಕ್ಷೇತ್ರಗಳಲ್ಲಿ ಹೊಸತನ ಮತ್ತು ಪ್ರಭಾವವನ್ನು ಸೂಚಿಸುತ್ತದೆ.
ಯುವರಾಜ ಖಾಲಿದ್ ಬಿನ್ ಅಲ್ ವಲೀದ್ ಬಿನ್ ತಲಾಲ್ ಬಿನ್ ಅಬ್ದುಲ್ ಅಝೀಝ್ ಅಲ್ ಸೌದ್, ಶೇಖ್ ಡಾ. ಮಾಜಿದ್ ಬಿನ್ ಸುಲ್ತಾನ್ ಅಲ್ ಖಾಸಿಮಿ, ಡಾ. ಅಬ್ದುಲ್ ಅಝೀಝ್ ಸಯೀದ್ ಬಿನ್ ಬುತ್ತಿ ಅಲ್ ಮುಹೈರಿ, ಡಾ. ಹಮೀದ್ ಎಂ.ಕೆ. ಅಲ್ ನಈಮಿ, ಹುಸೇನ್ ಮುಹಮ್ಮದ್ ಅಲ್ ಮಹಮೂದಿ, ಡಾ. ಸುಸಾನ್ ಮಮ್, ನಝ್ಲಾ ಅಹ್ಮದ್ ಅಲ್ ಮಿದ್ಫಾ, ಅಹ್ಮದ್ ಉಬೈದ್ ಅಲ್ ಕಸೀರ್, ಖಾಲಿದ್ ಇಸ್ಸಾ ಅಲ್ ಹುರೈಮೆಲ್, ಡಾ. ಆಯಿಶಾ ಬಿಂತ್ ಬುತ್ತಿ ಬಿನ್ ಬಿಶ್ರ್, ಅಡೆಲ್ ಅಬ್ದುಲ್ಲಾ ಅಲಿ, ಸಮೀರ್ ಸಲೀಮ್ ಅಲ್ ಸಾಯೆಗ್, ಅಬ್ದುಲ್ ಅಝೀಝ್ ಅಲ್ ಲೌಹಾನಿ, ಮುದಸ್ಸಿತ್ ಶೇಖಾ ಮತ್ತು ಅಲಿಶಾ ಮೂಪನ್ ನಿರ್ದೇಶಕರ ಬೋರ್ಡ್ ಗೆ ನೇತೃತ್ವ ನೀಡುತ್ತಿದ್ದಾರೆ.
ಶಾರ್ಜಾ ಮಾತ್ರವಲ್ಲದೇ ಅದರಾಚೆಗೂ SRTIP ಮತ್ತು ಅದರ ಸಹಯೋಗಿತ SoiLAB ಮೂಲಕ ಸೃಜನಶೀಲತೆ, ತಾಂತ್ರಿಕ ಪ್ರಗತಿ ಮತ್ತು ನಾವೀನ್ಯತೆ, ಉದ್ಯಮಶೀಲತೆ ಹಾಗೂ ಅಭಿವೃದ್ಧಿಗೆ ಅನುಕೂಲಕರವಾದ ವಾತಾವರಣ ಸೃಷ್ಟಿಸುವ ದೂರದೃಷ್ಟಿಯನ್ನು ಫೈಝಲ್ ಕೊಟ್ಟಿಕೊಲ್ಲನ್ ಅವರು ಹೊಂದಿದ್ದಾರೆ.
ಫೈಝಲ್ ಖ್ಯಾತ ಮಲಯಾಳಿ ಉದ್ಯಮಿ, ಸಮಾಜ ಸೇವಕ ಹಾಗೂ ಪೀಕೆ ಗ್ರೂಫ್ ಆಫ್ ಕಂಪೆನೀಸ್ ಅಧ್ಯಕ್ಷರಾದ ಪಿ.ಕೆ. ಅಹ್ಮದ್ ರವರ ಪುತ್ರನಾಗಿದ್ದಾರೆ. ಇವರು ತುಂಬೆ ಬಿ.ಎ ಗ್ರೂಪ್ ನ ಸ್ಥಾಪಕ, ಸಾಮಾಜಿಕ, ಸಾಮುದಾಯಿಕ ಮುಖಂಡರಾಗಿದ್ದ ದಿವಂಗತ ಬಿ. ಅಹ್ಮದ್ ಹಾಜಿಯವರ ಪುತ್ರಿ ಶಬಾನಾ ಫೈಝಲ್ ರನ್ನು ವಿವಾಹವಾಗಿದ್ದಾರೆ.
ಕೆಇಎಫ್ ಗ್ರೂಪ್ ಗುರಿತು:
ಕೆಇಎಫ್ ಹೋಲ್ಡಿಂಗ್ ಸೃಜನಶೀಲಾತ್ಮಕವಾಗಿರುವ ಮತ್ತು ಹೊಸ ತರಹದ ಉದ್ಯಮಗಳಿಗೆ ಹೂಡಿಕೆ ಮಾಡುತ್ತದೆ. ಇದು ಹೆಚ್ಚಾಗಿ ಮೂಲಭೂತ ಸೌಕರ್ಯಗಳು, ನೂತನ ತಂತ್ರಜ್ಞಾನಗಳು, ಆರೋಗ್ಯ ಕ್ಷೇತ್ರಗಳ ಮುಂತಾದೆಡೆ ಕ್ರಾಂತಿತರುವ , ನೆಮ್ಮದಿಯ ನಾಳೆಗಳನ್ನು ಮತ್ತು ಉತ್ತಮ ಸಮಾಜವನ್ನು ಸೃಷ್ಟಿಸುವ ಉದ್ಯಮಗಳನ್ನು ಬೆಳೆಸುತ್ತದೆ.
ಈ ಸಂಸ್ಥೆಯು ಯಶಸ್ವಿ ಉದ್ಯಮ ನಿರ್ಮಿಸುವ 20 ವರ್ಷಗಳ ಪರಂಪರೆಯನ್ನು ಹೊಂದಿದೆ. ಇದು 1995 ರಲ್ಲಿ ಅಜ್ಮಾನ್ ನಲ್ಲಿ ಅಲ್ ಅಹಮದಿ ಜನರಲ್ ಟ್ರೇಡಿಂಗ್ ಅನ್ನು ತೆರೆಯುವುದರೊಂದಿಗೆ ತನ್ನ ಪ್ರಯಾಣವನ್ನು ಪ್ರಾರಂಭಿಸಿತು. ನಂತರ ವಿಶ್ವ ದರ್ಜೆಯ ಫೌಂಡ್ರಿ ಮತ್ತು ವಾಲ್ವ್ ಟ್ರೇಡಿಂಗ್ ಕಂಪನಿ JC ಮಿಡಲ್ ಈಸ್ಟ್ ಅನ್ನು ಪ್ರಾರಂಭಿಸಿತು. ಬಳಿಕ ಎಮಿರೇಟ್ಸ್ ಟೆಕ್ನೋ ಕಾಸ್ಟಿಂಗ್ ಅನ್ನು ಸ್ಥಾಪಿಸಲಾಯಿತು. ಇದು ಅತ್ಯಾಧುನಿಕ ಎಂಜಿನಿಯರಿಂಗ್ ಮತ್ತು ವಿನ್ಯಾಸ ಲ್ಯಾಬ್, ವಿಶ್ವದ ಅತಿದೊಡ್ಡ ಸ್ವಯಂಚಾಲಿತ ಮೋಲ್ಡಿಂಗ್ ಲೈನ್, ಸ್ಟೀಲ್ ರಿಫೈನಿಂಗ್ ಫರ್ನೇಸ್, ಮೆಷಿನ್ ಶಾಪ್, ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಲ್ಯಾಬ್ ಅನ್ನು ಒಳಗೊಂಡಿರುವ ಒಂದು ಸಂಯೋಜಿತ ಸೌಲಭ್ಯವನ್ನು ಒದಗಿಸುವಲ್ಲಿ ಟಾಪ್ 3 ಸ್ಥಾನವನ್ನು ಗಿಟ್ಟಿಸಿದೆ.
2012 ರಲ್ಲಿ ಟೈಕೋ ಇಂಟರ್‌ನ್ಯಾಶನಲ್ 400 ಮಿಲಿಯನ್ ಯುಎಸ್ ಡಾಲರ್ ಗೆ ಉದ್ಯಮವನ್ನು ಖರೀದಿತು. ಇದು KEF ಹೋಲ್ಡಿಂಗ್ಸ್‌ನ ಎರಡು ಹೊಸ ವಿನೂತನ ಯೋಜನೆಗಳಾದ KEF ಇನ್ವೆಸ್ಟ್‌ಮೆಂಟ್ಸ್ ಮತ್ತು KEF ಇನ್‌ಫ್ರಾ ಬಿಡುಗಡೆಗೆ ಸ್ಪೂರ್ತಿಯಾಯಿತು. KEF ಇನ್ವೆಸ್ಟ್‌ಮೆಂಟ್ಸ್, ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಕಡಿಮೆ-ಅಪಾಯ, ಹೆಚ್ಚಿನ ಆದಾಯದ ಅವಕಾಶಗಳನ್ನು ನಿರ್ಮಿಸಿದೆ.
2018 ರಲ್ಲಿ, KEF ಇನ್ಫ್ರಾ, ಅಮೆರಿಕಾದ ತಂತ್ರಜ್ಞಾನ ಕಂಪನಿಯಾದ ವಿನ್ಯಾಸ ಮತ್ತು ನಿರ್ಮಾಣ ಉದ್ಯಮಗಳಲ್ಲಿ ಕ್ರಾಂತಿಯನ್ನುಂಟುಮಾಡುವ Katerra ಮೆನ್ಲೋ ಪಾರ್ಕ್ ನೊಂದಿಗೆ ವಿಲೀನವನ್ನು ಘೋಷಿಸಿತು. ಯಶಸ್ವಿ ಉದ್ಯಮಗಳನ್ನು ಮಾತ್ರವಲ್ಲದೇ ಫೈಝಲ್ ಎಂಡ್ ಶಬಾನಾ ಫೌಂಡೇಶನ್ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುವ ಮೂಲಕ ಸಮಾಜಕ್ಕೂ ತನ್ನ ಪಾಲನ್ನು ನೀಡುತ್ತಿದೆ.