ಫೆಬ್ರವರಿ 11 ರಂದು ಶಾರ್ಜಾ ದಲ್ಲಿ ಯುಎಇ ಕನ್ನಡಿಗರ ಅತಿದೊಡ್ಡ ಫ್ಯಾಮಿಲಿ ಸಮ್ಮಿಲನ ʼಮಹಬ್ಬ 24ʼ

Update: 2024-02-09 10:18 GMT

ಶಾರ್ಜಾ : ಅನಿವಾಸಿ ಕನ್ನಡಿಗರ ಅತಿದೊಡ್ಡ ಸಾಮಾಜಿಕ ವೇದಿಕೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ - ಕೆಸಿಎಫ್ ಹತ್ತನೇ ವರ್ಷಾಚರಣೆಯ ಪ್ರಯುಕ್ತ ಬೃಹತ್ ಸಾರ್ವಜನಿಕ ಸಮ್ಮಿಲನ ಮಹಬ್ಬ ಫ್ಯಾಮಿಲಿ ಫೆಸ್ಟ್-24 ಇದೇ ಬರುವ ಫೆಬ್ರವರಿ 11 ರಂದು ಭಾನುವಾರ ಶಾರ್ಜಾ ಅಲ್ ಧೈದ್ ರಸ್ತೆಯಲ್ಲಿರುವ ಬತಾಃ ಗಾರ್ಡನ್ ನಲ್ಲಿ ನಡೆಯಲಿದೆ. ಬೆಳಿಗ್ಗೆ 8 ರಿಂದ ರಾತ್ರಿ 8ರ ವರೆಗೆ ವೈಶಿಷ್ಟ್ಯತೆಯಿಂದ ಕೂಡಿದ ಹಲವಾರು ಕಾರ್ಯಕ್ರಮಗಳು ನಡೆಯಲಿದೆ.

ಈ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೆಸಿಎಫ್ ಐಸಿ ನಾಯಕರು ವಿಚಾರ ಸಂಕಿರಣ, ಆಧ್ಯಾತ್ಮಿಕ ಶಿಬಿರ, ಲೈವ್ ಫಾಕ ಶಾಲೆ, ದಫ್ಫ್ ಸ್ಪರ್ಧೆ, ವಾಲಿಬಾಲ್, ಹಗ್ಗ ಜಗ್ಗಾಟ, ಕಬಡ್ಡಿ ಸೇರಿದಂತೆ ವಿವಿಧ ಆಟೋಟಗಳು, ಐತಿಹಾಸಿಕ ಪ್ರವಾಸ , ಆರೋಗ್ಯ ತಪಾಸಣೆ, ಹಾಡು, ಚಿತ್ರಕಲೆ (ಡ್ರಾಯಿಂಗ್) ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು , ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕವಾಗಿ ಹಲವು ಸ್ಪರ್ಧೆಗಳು ನಡೆಯಲಿದೆ ಎಂದು ತಿಳಿಸಿದರು.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಕರ್ನಾಟಕ ವಿಧಾನ ಸಭಾ ಸ್ಪೀಕರ್ ಸನ್ಮಾನ್ಯ ಯುಟಿ ಖಾದರ್ ರವರು ಭಾಗವಹಿಸಲಿದ್ದು, ದುಆ ನೇತೃತ್ವವನ್ನು ಸಯ್ಯದ್ ಜಅಫರ್ ಸ್ವಾದಿಕ್ ತಂಘಳ್ ಕುಂಬೋಳ್ ರವರು ನಿರ್ವಹಿಸಲಿದ್ದಾರೆ. ಕೆಸಿಎಫ್ ಯುಎಇ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಸಖಾಫಿ ಕೆದುಂಬಾಡಿ ಅಧ್ಯಕ್ಷತೆ ವಹಿಸಲಿದ್ದಾರೆ, ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಯೂಸುಫ್ ಸಖಾಫಿ ಬೈತಾರ್, ವೆಲ್ಫೇರ್ ಡಿವಿಷನ್ ಅಧ್ಯಕ್ಷರಾದ ಅಬೂಬಕರ್ ಹಾಜಿ ರೈಸ್ಕೊ, ವೆಲ್ಫೇರ್ ಡಿವಿಷನ್ ಕಾರ್ಯದರ್ಶಿ ಇಕ್ಬಾಲ್ ಬರಕಾ, ಖ್ಯಾತ ಉಧ್ಯಮಿಗಳಾದ ಜನಾಬ್ ಯುಟಿ ಇಫ್ತಿಕಾರ್ ಫರೀದ್, ಜನಾಬ್ ಮುಂತಾಝ್ ಅಲಿ ಮಂಗಳೂರು, ಶಾರ್ಜಾ ಇಂಡಿಯನ್ ಅಸೋಸಿಯೇಷನ್ ಅಧ್ಯಕ್ಷರಾದ ನಿಸಾರ್ ತಳಂಗರ, ಕೆಸಿಎಫ್ ಐ ಸಿ ಕೋಶಾಧಿಕಾರಿ ಅಲಿ ಮುಸ್ಲಿಯಾರ್ ಬಹರೈನ್, ಅಬೂಸಾಲಿಹ್ ಹಾಜಿ (ನಫೀಸ್ ಗ್ರೂಪ್ ), ಅಶ್ರಫ್ ಶಾ ಮಂತೂರು ಸೇರಿದಂತೆ ಯುಎಇಯಲ್ಲಿರುವ ಹಿರಿಯ ಉದ್ಯಮಿಗಳು, ಧಾರ್ಮಿಕ ಮುಖಂಡರುಗಳು, ಸಾಮಾಜಿಕ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ದುಬೈಯಲ್ಲಿ ಜನ್ಮ ತಾಳಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ 15000 ಕ್ಕೂ ಮಿಕ್ಕ ಕನ್ನಡಿಗ ಸದಸ್ಯರನ್ನೊಳಗೊಂಡು ಅರಬ್ ರಾಷ್ಟ್ರಗಳು ಮತ್ತು ಮಲೇಷ್ಯಾ ಲಂಡನ್ ನಲ್ಲಿ ಕಾರ್ಯಾಚರಿಸುತ್ತಿದೆ. ಹಲವಾರು ಸಾಮಾಜಿಕ, ಶೆಕ್ಷಣಿಕ, ಸಾಮುದಾಯಿಕ ಸೇವೆಗಳೊಂದಿಗೆ ಗುರುತಿಸಿಕೊಂಡಿರುವ ಕೆ.ಸಿ.ಎಫ್ ನಿರಾಶ್ರಿತರಿಗೆ ಆಶ್ರಯ ಯೋಜನೆ, ಬಡವರ ಕಲ್ಯಾಣ ಯೋಜನೆ, ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ, ಉತ್ತರ ಕರ್ನಾಕದಲ್ಲಿ ಉಚಿತ ಶಿಕ್ಷಣ ಸಂಸ್ಥೆಗಳು ಮೊದಲಾದ ಜನಪರ ಸೇವೆಗಳನ್ನುಮಾಡುತ್ತಾ ಬರುತ್ತಿದೆ. ಗಲ್ಫ್ ರಾಷ್ಟ್ರದಲ್ಲಿ ಅಲ್ಲಿನ ಸರಕಾರದ ಅನುಮೋದನೆಯೊಂದಿಗೆ ಮೊತ್ತ ಮೊದಲ ಬಾರಿಗೆ ಗಲ್ಫ್ ಇಶಾರ ಕನ್ನಡ ಮಾಸಿಕವು ಬಿಡುಗಡೆಗೊಳಿಸಿ ಪ್ರತಿಯೊಬ್ಬಅನಿವಾಸಿ ಕನ್ನಡಿಗನ ಮನೆ ಬಾಗಿಲಿಗೆ ತಲುಪುತ್ತಿದೆ. ಇದು ವಿದೇಶ ರಾಷ್ಟ್ರಗಳಲ್ಲಿ ಕೆಸಿಎಫ್ ಕನ್ನಡ ಭಾಷೆ, ಜಲ, ನೆಲ, ಸಂಸ್ಕೃತಿಗೆ ನೀಡುವ ಗೌರವವಾಗಿರುತ್ತದೆ. ಅನಿವಾಸಿ ಕನ್ನಡಿಗರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹೊರತರುವಲ್ಲಿ ಗಲ್ಫ್ ನಾದ್ಯಂತ ಆಯೋಜಿಸುತ್ತಿರುವ ಪ್ರತಿಭೋತ್ಸವವು ಕೆಸಿಎಫ್ ಸಾಹಿತ್ಯ ರಂಗಕ್ಕೆ ನೀಡುತ್ತಿರುವ ಕೊಡುಗೆಗಳಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಮೊದಲಾದ ಭಾರತದ ರಾಷ್ಟ್ರೀಯ ದಿನಗಳನ್ನು ವಿವಿಧ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಅನಿವಾಸಿ ಕನ್ನಡಿಗರನ್ನುಸೇರಿಸಿ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಕರುಣೆಯ ನೆರಳು ಎಂಬ ನಾಮದಲ್ಲಿ ಮನೆಗಳನ್ನು ನಿರ್ಮಿಸಿ ಬದುಕಲು ಸೂರು ಎಂಬ ಹಲವು ಕನಸನ್ನು ನನಸು ಮಾಡಲು ಕೆಸಿಎಫ್  ಸಜ್ಜಾಗಿದೆ ಎಂದರು.

ಅನಿವಾಸಿ ಕನ್ನಡಿಗರ ಪಾಲಿಗೆ ಆಶಾಕಿರಣವಾಗಿ ಕೊರೋನಾ ಮಹಾಮಾರಿ ಸಂದರ್ಭದಲ್ಲಿ ಊರಿಗೆ ತೆರಳಲು ಸಂದಿಗ್ದ ಪರಿಸ್ಥಿತಿಯಲ್ಲಿ ಎಂಟಕ್ಕಿಂತ ಹೆಚ್ಚು ಚಾರ್ಟೆಡ್ ವಿಮಾನ ವ್ಯವಸ್ಥೆ, ಕಿಟ್ ವಿತರಣೆ, ದುಬೈ ಪೊಲೀಸ್ ಸಹಯೋಗದಲ್ಲಿ ಸ್ವಯಂ ಸೇವಕ ವ್ಯವಸ್ಥೆ, ವೀಸಾ, ಪಾಸ್ಪೋರ್ಟ್ ಸಮಸ್ಯೆಗಳಿಂದ ಊರಿನ ದಾರಿಯೇ ಕಮರಿ ಹೋದ ಅದೆಷ್ಟೋ ಪ್ರವಾಸಿಗಳಿಗೆ ಜಾತಿ ಧರ್ಮ ನೋಡದೆ ಕಾನೂನು ರೀತಿಯ ಸಹಾಯ ಮಾಡಿ ಕೊಟ್ಟು ಅವರನ್ನು ಊರಿಗೆ ಕಳುಹಿಸಿಕೊಟ್ಟು ಸಹಕರಿಸುತ್ತಿದೆ. ಚಿಕ್ಕ ಪುಟ್ಟ ಕಾರಣಗಳಿಂದ ಜೈಲು ಸೇರಿದ ಅಮಾಯಕರನ್ನು ಬಿಡುಗಡೆಗೊಳಿಸಿ ಅವರ ಕುಟುಂಬದ ಕಣ್ಣೀರು ಒರೆಸಿಕೊಟ್ಟಿದೆ. ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ರೋಗಿಗಳನ್ನುಕಂಡು ಅವರಿಗೆ ಬೇಕಾದ ಎಲ್ಲಾ ರೀತಿಯ ಸಹಾಯ ಸಹಕಾರಗಳನ್ನು ಮಾಡಿ ಕೊಟ್ಟು ಅವರನ್ನು ಕುಟುಂಬಕ್ಕೆ ತಲುಪಿಸಿಕೊಟ್ಟಿದೆ. ವಿದೇಶ ರಾಷ್ಟ್ರಗಳಲ್ಲಿ ಅಫಘಾತದಿಂದ ಮರಣ ಹೊಂದಿದ ಕುಟುಂಬಗಳಿಗೆ ಸಂತ್ವಾನವನ್ನು ಮಾಡಿ ಯಾವುದೇ ಪ್ರತಿಫಲಾಪೇಕ್ಷೆ ಬಯಸದೆ ಅವರ ಕಣ್ಣೀರು ಒರೆಸುವಂತಹ ಕೆಲಸಗಳನ್ನು ಮಾಡುತ್ತಿದೆ ಎಂದು ಹೇಳಿದರು.

ಯುಎಇಯಲ್ಲಿರುವ ಎಲ್ಲಾ ಅನಿವಾಸಿ ಕನ್ನಡಿಗರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದ್ದಾರೆ.

ಪತ್ರಿಕಾ ಗೋಷ್ಠಿಯಲ್ಲಿ ಇಬ್ರಾಹಿಂ ಸಖಾಫಿ ಕೆದುಂಬಾಡಿ (ಅಧ್ಯಕ್ಷರು, ಕೆಸಿಎಫ್ ಯುಎಇ), ಝೈನುದ್ದೀನ್ ಹಾಜಿ ಬೆಳ್ಳಾರೆ (ಚೇರ್ಮನ್, ಮಹಬ್ಬ 24, ಸ್ವಾಗತ ಸಮಿತಿ ), ಮೂಸ ಹಾಜಿ ಬಸರಾ (ಪ್ರಧಾನ ಕಾರ್ಯದರ್ಶಿ, ಕೆಸಿಎಫ್ ಯುಎಇ), ಇಬ್ರಾಹಿಂ ಹಾಜಿ ಬ್ರೈಟ್ (ಕನ್ವೀನರ್, ಮಹಬ್ಬ 24, ಸ್ವಾಗತ ಸಮಿತಿ), ಶಾಹುಲ್ ಹಮೀದ್ ಸಖಾಫಿ (ಸಂಚಾಲಕರು, ಮಹಬ್ಬ 24, ಸ್ವಾಗತ ಸಮಿತಿ), ಉಸ್ಮಾನ್ ಹಾಜಿ ನಾಪೋಕ್ಲು (ಕೆಸಿಎಫ್ ಐಸಿ ನಾಯಕರು), ಕರೀಂ ಮುಸ್ಲಿಯಾರ್ ಶಾರ್ಜಾ (ಕೆಸಿಎಫ್ ಐಸಿ ನಾಯಕರು) ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News