ಮಸ್ಕತ್: ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಗಣರಾಜ್ಯೋತ್ಸವ ಆಚರಣೆ
ಮಸ್ಕತ್: ಸೌತ್ ಕೆನರಾ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಓಮಾನ್’ನ ಮಸ್ಕತ್ ನಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಮುಹಮ್ಮದ್ ಅಝೀಂ ಅವರು ಧ್ವಜಾರೋಹಣಗೈದರು.
ಈ ಪ್ರಯುಕ್ತ ಸಮಾರಂಭದಲ್ಲಿ ಭಾಗಿಯಾದವರಿಗೆ "ತೋಟದಲ್ಲಿ ಊಟ " ಎಂಬ ಶೀರ್ಷಿಕೆ ಅಡಿಯಲ್ಲಿ ಮಕ್ಕಳಿಗೂ, ಪುರುಷರಿಗೂ ಮತ್ತು ಮಹಿಳಾ ಸ್ವಯಂಸೇವಕರಿಂದ ಮಹಿಳೆಯರಿಗೆ ಊಟದೊಂದಿಗೆ ಆಟವನ್ನೂ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬಾರಿಕ್ ಗ್ರೂಪ್ ವ್ಯವಸ್ಥಾಪಕರಾದ ಜನಾಬ್ ಶಂಶೀರ್, ಡಿಕೆಎಸ್ ಸಿ ಅಧ್ಯಕ್ಷರಾದ ಮೋನಬ್ಬ ಅಬ್ದುಲ್ ರಹಿಮಾನ್, ಧಾರ್ಮಿಕ ಗುರುಗಳಾದ ಜನಾಬ್ ಮಹಮೂದ್ ಸಾಹೇಬ್, ಇಂಡಿಯನ್ ಸೋಶಿಯಲ್ ಕ್ಲಬ್ ಬ್ಯಾರಿ ವಿಂಗ್ ಸಂಚಾಲಕ ಫಯಾಜ್ ಹಸೈನಾರ್ , ಯೂಸುಫ್ ಬಾರಾಮತಿವಾಲ, ಶೈಖ್ ಆದಿಲ್, ಉದ್ಯಮಿ ಅಬಿದ್ ಪಾಶ ಉಪಸ್ಥಿತರಿದ್ದರು.
ಮಹಿಳೆಯರಿಗಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ದೆಯ ವಿಜೇತರಿಗೂ, ಭಾಗವಹಿಸಿದವರಿಗೂ ಬಹುಮಾನ ನೀಡಲಾಯಿತು. ಸುಮಾರು ನಾಲ್ಕು ದಶಕಗಳಿಂದ ಒಮಾನಿನಲ್ಲಿ ಸಮಾಜಸೇವೆಗೈದ ಕೆ.ಎಸ್.ಎ ರಹೀಂರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಉಸ್ತುವಾರಿಯನ್ನು ಮುಹಮ್ಮದ್ ಆಸಿಫ್ ಗಫೂರ್ ವಹಿಸಿದ್ದರು. ಮಾಸ್ಟರ್ ಮುಹಮ್ಮದ್ ಝೈದ್ ಆಸಿಫ್ ಖಿರಾಅತ್ ಪಠಿಸಿದರು, ತಾಜುದ್ದೀನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಮೀರ್ ಅಹಮದ್ ಧನ್ಯವಾದಗೈದರು. ಮೊಹಿದ್ದೀನ್ ಸಾಹೇಬ್ ಸಾಸ್ತಾನ ಮತ್ತು ಅನ್ಸಾರ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.