MGT ಜುಬೈಲ್ ಘಟಕದ ನೂತನ ಅಧ್ಯಕ್ಷರಾಗಿ ಶಮೀಮ್ ಅಹ್ಮದ್ ಆಯ್ಕೆ
ಜುಬೈಲ್: ಮಲ್ನಾಡ್ ಗಲ್ಫ್ ಟ್ರಸ್ಟ್ ಇದರ ಜುಬೈಲ್ ಘಟಕದ 2023ನೇ ಸಾಲಿನ ವಾರ್ಷಿಕ ಮಹಾಸಭೆಯು ಜುಬೈಲ್ ನ ಕ್ಲಾಸಿಕ್ ರೆಸ್ಟೋರೆಂಟ್ ನಲ್ಲಿ ಶುಕ್ರವಾರ ಮಧ್ಯಾಹ್ನ ನಡೆಯಿತು.
ಹುಮೈದ್ ಬಿನ್ ಮೊಹಮ್ಮದ್ ಶರೀಫ್ ಖಿರಾಅತ್ ಮೂಲಕ ಆರಂಭಗೊಂಡ ಸಭೆಯಲ್ಲಿ MGT ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ನಂತರ ಕಾರ್ಯಕ್ರಮವನ್ನು ನಿರೂಪಿಸಿದ ಇಬ್ರಾಹಿಂ ತೆಂಗಿನಮನೆ ಅವರು ಸಭಾಧ್ಯಕ್ಷತೆಯನ್ನು ವಹಿಸಿಕೊಳ್ಳಲು ಜುಬೈಲ್ ಘಟಕದ ಅಧ್ಯಕ್ಷರಾದ ಅಬೂಬಕ್ಕರ್ ಹ೦ಡುಗುಳಿಯವರನ್ನು ವೇದಿಕೆಗೆ ಆಹ್ವಾನಿಸಿದರು. ಜುಬೈಲ್ ಘಟಕದ ಗೌರವಾಧ್ಯಕ್ಷರಾದ ಶರೀಫ್ ಸ್ಯಾಂಕನ್, ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶಮೀಮ್ EPCC, ಹಿರಿಯ ಸಲಹೆಗಾರರಾದ ಮೊಹಮ್ಮದ್ ಫಾರೂಕ್ ಅರಬ್ ಎನರ್ಜಿ, ಜುಬೈಲ್ ಘಟಕದ ಪ್ರಧಾನ ಕಾರ್ಯದರ್ಶಿ ಮೊಹ್ಸಿನ್ ಕಮಾಲ್, ಖಜಾಂಚಿ ಅಬ್ದುಲ್ ಲತೀಫ್ ಹಾಗೂ ಉಪಾಧ್ಯಕ್ಷರಾದ ಮುನೀರ್ ಅವರನ್ನು ವೇದಿಕೆಗೆ ಆಹ್ವಾನಿಸಲಾಯಿತು.
ಅಸ್ಲಮ್ ಕಡಬಗೆರೆ ದುಃವಾ ನೆರವೇರಿಸಿದ ನಂತರ ಶಮೀಮ್ ಅವರು ಸ್ವಾಗತಿಸಿದರು.
ಜುಬೈಲ್ ಘಟಕದ 2023ರ ಸಾಲಿನ ವಾರ್ಷಿಕ ವರದಿ ಮತ್ತು ಲೆಕ್ಕ ಪತ್ರಗಳನ್ನು ಕ್ರಮವಾಗಿ ಮೊಹ್ಸಿನ್ ಹಾಗು ಅಬ್ದುಲ್ ಲತೀಫ್ ಅವರು ಸಭೆಯಲ್ಲಿ ಮಂಡಿಸಿದರು. ಅವೆರಡನ್ನು ಮಂಜೂರು ಮಾಡಲಾಯಿತು.
ಅಧ್ಯಕ್ಷರಾದ ಅಬೂಬಕ್ಕರ್ ಅವರು ಕಳೆದ ಮೂರು ವರ್ಷಗಳಲ್ಲಿ ತನ್ನ ಅಧ್ಯಕ್ಷತೆಯಲ್ಲಿ ಜುಬೈಲ್ ಘಟಕದ ಯಶಸ್ಸಿಗಾಗಿ ಶ್ರಮಿಸಿದ ಹಾಗು ಸಹಕಾರ ನೀಡಿದ ಎಲ್ಲಾ ಹಿರಿಯ, ಕಿರಿಯ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸಿ ಸಮಿತಿಯನ್ನು ಬರ್ಖಾಸ್ತು ಗೊಳಿಸಲಾಯಿತು.
ಅಸರ್ ನಮಾಝ್ ನಂತರ ಹೊಸ ಸಮಿತಿಯನ್ನು ರಚಿಸಲು ಅಶ್ರಫ್ ನಾಳ, ಇರ್ಫಾನ್ ಉಪ್ಪಳ್ಳಿ ಹಾಗು ಇಬ್ರಾಹಿಂ ತೆಂಗಿನಮನೆಯವರನ್ನು ನೇಮಕ ಮಾಡಲಾಯಿತು.
ಶಮೀಮ್ ಅಹ್ಮದ್ ಅವರನ್ನು ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆರಿಸಲಾಯಿತು. ಮೊಹ್ಸಿನ್ ಹಾಗು ಅಬ್ದುಲ್ ಲತೀಫ್ ರನ್ನು ಕ್ರಮವಾಗಿ ಪ್ರಧಾನ ಕಾರ್ಯದರ್ಶಿ ಹಾಗು ಖಜಾಂಚಿಗಳನ್ನಾಗಿ ಮುಂದುವರಿಸಲಾಯಿತು.
MGT - ಜುಬೈಲ್ ಘಟಕದ 2024ರ ಸಾಲಿನ ಹೊಸ ಸಮಿತಿಯ ವಿವರ
ಗೌರವಾಧ್ಯಕ್ಷರು :ಅಬೂಬಕ್ಕರ್ ಹಂಡುಗುಳಿ
ಅಧ್ಯಕ್ಷರು: ಶಮೀಮ್ ಅಹ್ಮದ್
ಉಪಾಧ್ಯಕ್ಷರು: ಖಲಂದರ್ ಶಿವಮೊಗ್ಗ ಹಾಗು ಝಹೀರ್ ಅಬ್ಬಾಸ್
ಪ್ರಧಾನ ಕಾರ್ಯದರ್ಶಿ: ಮೊಹ್ಸಿನ್ ಕಮಾಲ್
ಸಹಕಾರ್ಯದರ್ಶಿಗಳು: ಆಸಿಫ್ ಶೆಟ್ಟಿಕೊಪ್ಪ ಹಾಗು ಹುದೈಫ್ ಕಳಸ
ಖಜಾಂಚಿ: ಅಬ್ದುಲ್ ಲತೀಫ್ ಶಾಂತಿಪುರ
ಹಿರಿಯ ಸಲಹೆಗಾರರು: ಶರೀಫ್ ಕಳಸ ಸ್ಯಾಂಕನ್, ಫಾರೂಕ್ ಅರಬ್ ಎನರ್ಜಿ, ಮೊಹಮ್ಮದ್ ರಾಫಿ ತೀರ್ಥಹಳ್ಳಿ, ಮುನೀರ್, ಅಶ್ರಫ್ ನಾಳ ಹಾಗು ಇಬ್ರಾಹಿಂ ತೆಂಗಿನಮನೆ.
ಸದಸ್ಯತ್ವ ಅಭಿಯಾನದ ಮೇಲ್ವಿಚಾರಕರಾಗಿ ಅಸ್ಲಮ್ ಕಡಬಗೆರೆಯವರನ್ನು ನೇಮಿಸಲಾಯಿತು. ಅವರಿಗೆ ಸಹಾಯಕರಾಗಿ ಸಾದಿಕ್ ಕಮ್ಮರಡಿ, ಇಸ್ಮಾಯಿಲ್ ಹಾಸನ ಹಾಗು ಶಬೀರ್ ಕೊಡಗು ಅವರನ್ನು ನೇಮಿಸಲಾಯಿತು.
ಕ್ರೀಡಾಸಮಿತಿಯ ಉಸ್ತುವಾರಿಯನ್ನು ಮುಸ್ತಾಕ್ ಅಹ್ಮದ್, ಅಮೀರ್ ಸುಹೈಲ್ ಹಾಗು ಹನೀಫ್ ಕಡಬಗೆರೆಯವರಿಗೆ ವಹಿಸಲಾಯಿತು.
ಸ್ಪಾನ್ಸರಿಂಗ್ ಕಮಿಟಿ, ಮೀಡಿಯ ಕಮಿಟಿ, ಇವೆಂಟ್ ಮ್ಯಾನೇಜ್ಮೆಂಟ್ ಕಮಿಟಿ ಹಾಗು ಕ್ಯಾಟರಿಂಗ್ ಕಮಿಟಿಗಳನ್ನು ಕಳೆದ ವರ್ಷದಂತೆ ಕಾಯ್ದುಕೊಳ್ಳಲು ತೀರ್ಮಾನಿಸಲಾಯಿತು.
ಮುಂದಿನ ವಾರದಲ್ಲಿ ಸರ್ವ ಸದಸ್ಯರ ಸಭೆಯನ್ನು ಕರೆದು, ಕೋರ್ ಕಮಿಟಿ ಹಾಗು ವರ್ಕಿಂಗ್ ಕಮಿಟಿಗಳನ್ನು ರಚಿಸಿ, ವಾರ್ಷಿಕ ಕ್ಯಾಲಂಡರ್ ರಚಿಸಲು ತೀರ್ಮಾನಿಸಲಾಯಿತು.
ಶರೀಫ್ ಸ್ಯಾಂಕನ್, ಫಾರೂಕ್ ಅರಬ್ ಎನರ್ಜಿ ಹಾಗು ಅಶ್ರಫ್ ನಾಳ ಅವರು ಸಂದರ್ಭೋಚಿತವಾಗಿ ಮಾತನಾಡಿ ಹೊಸ ಸಮಿತಿಗೆ ಶುಭ ಹಾರೈಸಿ, ನೂತನ ಸದಸ್ಯರನ್ನು ಹುರಿದುಂಬಿಸಿದರು.
ಮುನೀರ್ ಅವರು ಧನ್ಯವಾದಗಳನ್ನು ಸಮರ್ಪಿಸಿದರು.