ವಿಶ್ವದ ಅತ್ಯಂತ ಶ್ರೀಮಂತ ಕುಟುಂಬದ ಬಳಿ ಏನೇನಿದೆ? ಸ್ವಾರಸ್ಯಕರ ಮಾಹಿತಿ...

Update: 2024-01-20 04:59 GMT

Photo: instagram.com/mohamedbinzayed

ದುಬೈ: ವಿಶ್ವದ ಅತ್ಯಂತ ಶ್ರೀಮಂತ ಕುಟುಂಬ ಎನಿಸಿದ ಅಲ್ ನಹ್ಯಾನ್ ರಾಜಕುಟುಂಬ ವಾಸಿಸುವ ಅಧ್ಯಕ್ಷೀಯ ಅರಮನೆಯ ಮೌಲ್ಯ 4078 ಕೋಟಿ ರೂಪಾಯಿ. ಇದು ಪೆಂಟಗಾನ್ ಗಾತ್ರದ ಮೂರುಪಟ್ಟು ದೊಡ್ಡದು. ಈ ಅರಮನೆಯ ಜತೆಗೆ ಎಂಟು ಜೆಟ್ ವಿಮಾನಗಳು ಹಾಗೂ ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್ ಕ್ಲಬ್ ನ ಮಾಲೀಕತ್ವವೂ ಈ ಕುಟುಂಬದ ಹೆಮ್ಮೆ.

ಎಂಬಿಝೆಡ್ ಎಂದೇ ಜನಪ್ರಿಯವಾಗಿರುವ ಯುಎಇ ಅಧ್ಯಕ್ಷ ಶೈಖ್ ಮುಹಮ್ಮದ್ ಬಿನ್ ಝಾಯಿದ್ ಅಲ್ ನಹ್ಯಾನ್ ಅವರು ಕುಟುಂಬದ ಯಜಮಾನ. ಇವರಿಗೆ 18 ಮಂದಿ ಸಹೋದರರು ಹಾಗೂ 11 ಮಂದಿ ಸಹೋದರಿಯರು ಇದ್ದಾರೆ. ಈ ಎಮಿರೇಟ್ ರಾಜನಿಗೆ ಒಂಬತ್ತು ಮಕ್ಕಳು ಹಾಗೂ 18 ಮಂದಿ ಮೊಮ್ಮಕ್ಕಳು.

ಈ ಕುಟುಂಬ ವಿಶ್ವದ ತೈಲ ನಿಕ್ಷೇಪದಲ್ಲಿ ಶೇಕಡ 6ರಷ್ಟು ಪಾಲು ಹೊಂದಿದ್ದು, ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್ ನ ಮಾಲೀಕತ್ವವನ್ನೂ ಹೊಂದಿದೆ. ಖ್ಯಾತ ಗಾಯಕಿ ರಿಹಾನಾ ಅವರ ಬ್ಯೂಟಿ ಬ್ರಾಂಡ್ ಫೆಂಟಿಯಿಂದ ಹಿಡಿದು ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ವರೆಗೆ ಹಲವು ಪ್ರತಿಷ್ಠಿತ ಕಂಪನಿಗಳಲ್ಲಿ ಈ ಕುಟುಂಬದ ಪಾಲು ಇದೆ.

ಅಬುದಾಬಿಯ ರಾಜನ ತಮ್ಮ ಶೈಖ್ ಹಮದ್ ಬಿನ್ ಹಮ್ದಾನ್ ಅಲ್ ನಹ್ಯಾನ್ ಬಳಿ 700 ಕಾರುಗಳ ಸಂಗ್ರಹವಿದ್ದು, ವಿಶ್ವದ ಅತಿದೊಡ್ಡ ಎಸ್ ಯುವಿ, ಐದು ಬುಗಾಟಿ ವೆರ್ನೋಸ್, ಒಂದು ಲ್ಯಾಂಬರ್ ಗಿನಿ ರೆವೆಂಟನ್, ಒಂದು ಮರ್ಸಿಡೆಸ್ ಬೆನ್ಝ್ ಸಿಎಲ್ ಕೆ ಜಿಟಿಆರ್, ಒಂದು ಫೆರಾರಿ 599 ಎಕ್ಸ್ಎಕ್ಸ್ ಮತ್ತು ಮೆಕ್ಲರೇನ್ ಎಂಸಿ12 ಇದರಲ್ಲಿ ಸೇರಿವೆ.

ಅಬುದಾಬಿಯ ಭವ್ಯ ಕ್ವರ್ಸ್ ಅಲ್ ವತನ್ ಅಧ್ಯಕ್ಷೀಯ ಅರಮನೆಯಲ್ಲಿ ಈ ಕುಟುಂಬ ವಾಸವಿದ್ದು, ಇದು ಯುಎಇಯಲ್ಲಿ ಈ ಕುಟುಂಬ ಹೊಂದಿರುವ ಹಲವು ಅರಮನೆಗಳ ಪೈಕಿ ಅತ್ಯಂತ ದೊಡ್ಡ ಅರಮನೆ. 94 ಎಕರೆ ಪ್ರದೇಶದಲ್ಲಿ ಕಂಗೊಳಿಸುವ ಈ ಅರಮನೆ, ದೊಡ್ಡ ಗುಮ್ಮಟಗಳನ್ನು ಹೊಂದಿದ ಅರಮನೆಯಾಗಿದೆ. 3.5 ಲಕ್ಷ ಅಮೂಲ್ಯ ಹರಳುಗಳಿಂದ ಮಾಡಿದ ಗುಚ್ಛ ಹಾಗೂ ಅಮೂಲ್ಯ ಕಲಾಕೃತಿಗಳನ್ನು ಹೊಂದಿದೆ.



Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News