ಲೋಕಸಭಾ ಚುನಾವಣೆ : ಮತದಾನ ಮಾಡಿದ ಸಕಲೇಶಪುರದ ಶತಾಯುಷಿ ಸಿದ್ದಮ್ಮ

Update: 2024-04-26 17:05 IST
ಲೋಕಸಭಾ ಚುನಾವಣೆ : ಮತದಾನ ಮಾಡಿದ ಸಕಲೇಶಪುರದ ಶತಾಯುಷಿ ಸಿದ್ದಮ್ಮ

ಸಿದ್ದಮ್ಮ

  • whatsapp icon

ಸಕಲೇಶಪುರ : ಲೋಕಸಭಾ ಚುನಾವಣೆ ಭರದಿಂದ ಸಾಗಿದ್ದು, ಯುವಕ ಯುವತಿಯರಿಂದ ಹಿಡಿದು ವೃದ್ಧರೆಲ್ಲರೂ ಮತ ಚಲಾಯಿಸುತ್ತಿದ್ದಾರೆ. ವೃದ್ಧರು ನಡೆಯಲಾಗದಿದ್ದರೂ ಮತಗಟ್ಟೆವರಿಗೂ ಬಂದು ಮತ ಚಲಾಯಿಸುತ್ತಿರುವುದು ಕಂಡು ಬಂದಿದೆ.

ತಾಲೂಕಿನ ಬಾಳ್ಳುಪೇಟೆ ಗ್ರಾಪಂ ವ್ಯಾಪ್ತಿಯ ಹಸುಗವಳ್ಳಿ ಮತಗಟ್ಟೆಗೆ 101 ವರ್ಷದ ಸಿದ್ದಮ್ಮ ನಡೆದುಕೊಂಡು ಬಂದು ತನ್ನ ಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು. ತನ್ನ ಇಳಿ ವಯಸ್ಸಿನಲ್ಲೂ ನೆಡೆದುಕೊಂಡು ಬಂದು ಮತ ಚಲಾವಣೆ ಮಾಡಿದ್ದು ಇತರರಿಗೆ ಪ್ರೇರಣೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News