ಉತ್ತರ ಕರ್ನಾಟಕ ವಲಯ ಅಲ್ ಬಿರ್ರ್ ಕಿಡ್ಸ್ ಫೆಸ್ಟ್ -2024: ಹಿಸಾ ಗಾರ್ಡನ್ ಶಿರಸಿ ಚಾಂಪಿಯನ್

Update: 2024-01-21 18:17 GMT

ಹಾನಗಲ್ : ಸಮಸ್ತ ಕೇರಳ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಮಂಡಳಿಯ ವತಿಯಿಂದ ಉತ್ತರ ಕರ್ನಾಟಕ ವಲಯದ ಅಲ್ ಬಿರ್ರ್ ಶಾಲೆಗಳ ಪೂರ್ವ ಪ್ರಾಥಮಿಕ ವಿಭಾಗದ ಮಕ್ಕಳ ಪ್ರತಿಭೋತ್ಸವವು ಹಾನಗಲ್ ಅಲ್ ಹಿದಾಯ ಶಾಲಾ ವಠಾರದಲ್ಲಿ ನಡೆಯಿತು.

ಹಿಸಾ ಎಜ್ಯುಕೇಶನಲ್ ಟ್ರಸ್ಟ್ ಶಿರಸಿ ವತಿಯಿಂದ ನಡೆಸಲ್ಪಡುವ ಹಿಸಾ ಗಾರ್ಡನ್ ಪ್ರೀ ಪ್ರೈಮರಿ ಶಾಲೆ ಶಿರಸಿ ಚಾಂಪಿಯನ್ ಪಟ್ಟಣವನ್ನು ಅಲಂಕರಿಸಿತು. ಅಲ್ ಹಿದಾಯ ಪ್ರೀ ಪ್ರೈಮರಿ ಶಾಲೆ ಹಾನಗಲ್ ಪ್ರಥಮ ರನ್ನರ್ ಅಪ್ ಹಾಗೂ ಎಚ್ ಕೆ ಎಚ್ ನೂರುಲ್ ಹುದಾ ಪ್ರೀ ಪ್ರೈಮರಿ ಶಾಲೆ ಸಾಗರ ದ್ವಿತೀಯ ರನ್ನರ್ ಅಪ್ ಪ್ರಶಸ್ತಿ ಯನ್ನು ಪಡೆಯಿತು.

ಆಯಿಷಾ ತುಬಾ (ಹಿಸಾ ಗಾರ್ಡನ್ ಶಿರಸಿ ) ಕಲಾ ತಿಲಕ ಮತ್ತು ಮುಹಮ್ಮದ್ ಮಹದಿ (ಎಚ್ ಕೆ ಎಚ್ ನೂರುಲ್ ಹುದಾ ಸಾಗರ) ಕಲಾ ಪ್ರತಿಭೆಯಾಗಿ ಹೊರಹೊಮ್ಮಿದರು.

ಮಕ್ಕಳ ಪ್ರತಿಭೋತ್ಸವದಲ್ಲಿ ಶಿರಸಿ, ಹಾನಗಲ್, ಸಾಗರ, ಶಿಕಾರಿಪುರ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಅಲ್ ಬಿರ್ರ್ ಇನ್ಸ್‌ಪೆಕ್ಟರ್ ಎನ್ ಕೆ ಮುಹಮ್ಮದ್ ಹಾಗೂ ಹಾಜಿ ಕೆ ಅಬ್ದುಲ್ ಕರೀಂ ಶಿರಸಿ ವಿಜೇತರಿಗೆ ಟ್ರೋಫಿಗಳನ್ನು ವಿತರಿಸಿದರು.

ಮುಹಮ್ಮದ್ ಕುಟ್ಟಿ ಮಾಸ್ಟರ್ ಅವರ ನೇತೃತ್ವದ ಅಲ್ ಬಿರ್ರ್ ತಂಡ ಪ್ರತಿಭೋತ್ಸವದ ನೇತೃತ್ವ ವಹಿಸಿತ್ತು.

ರಫೀಕ್ ಮಾಸ್ಟರ್ ಮಂಗಳೂರು, ಅಬ್ದುಲ್ ಸಮದ್ ಸಾಲೆತ್ತೂರ್ ಹಾಗೂ ಫಿರೋಝ್ ಹುದವಿ ಕಾಸರಗೋಡು ತೀರ್ಪುಗಾರರಾಗಿದ್ದರು.

ಹಾಜಿ ಕೆ ಅಬ್ದುಲ್ ಕರೀಂ ಶಿರಸಿ ಇವರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಸಮಾರಂಭ ಹಾಗೂ ಸಮಾರೋಪ ಸಮಾರಂಭ ನಡೆಯಿತು.

ಸಮಸ್ತ ಮುಫತ್ತಿಷ್ ಮುಹಮ್ಮದ್ ಹನೀಫ್ ಮುಸ್ಲಿಯಾರ್ ದುಆ ನೆರವೇರಿಸಿದರು. ಹಾಜಿ ಕೆ ಹುಸೈನಬ್ಬ ಸಾಗರ, ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಅಬ್ದುಲ್ ಮಜೀದ್ ಸಾಗರ, ಎಂ ಬಿ ಕಲಾಲ್, ಹಿಸಾ ಗಾರ್ಡನ್ ಟ್ರಸ್ಟ್ ಶಿರಸಿ ಇದರ ಅಧ್ಯಕ್ಷ ಹಾಜಿ ಮುನೀರ್ ಅಹ್ಮದ್ ಶಿರಸಿ, ಫೆಸ್ಟ್ ಉಸ್ತುವಾರಿ ಮುಹಮ್ಮದ್ ಶರೀಫ್ ಹಾನಗಲ್, ಹನೀಫ್ ಶಿಕಾರಿಪುರ, ಸಾಗರ ಕೋರ್ಡಿನೇಟರ್ ಅಬ್ದುಲ್ ಮಜೀದ್ ಅರ್ಶದಿ, ಹಾನಗಲ್ ಕೋರ್ಡಿನೇಟರ್ ನಜೀಬ್ ಹುದವಿ, ಶಿಕಾರಿಪುರ ಕೋರ್ಡಿನೇಟರ್ ಮುಹಮ್ಮದ್ ಗೌಸ್, ಹಿಸಾ ಟ್ರಸ್ಟ್ ಸದಸ್ಯ ಹಾಜಿ ಇಬ್ರಾಹಿಂ ಸಾಗರ, ಕಾಸಿಂ ಸಾಬ್ ಸಾಗರ, ಬಲರಾಂ ಬಾಳಜ್ಜ, ಹಾಜಿ ಎಸ್ ಎಚ್ ಅಬ್ದುಲ್ ಹಮೀದ್ ಸಾಗರ, ಡಾ. ಖಲೀಲ್ ದರ್ಗಾ, ಸಯ್ಯದ್ ಫಾಝಿಲ್ ಸಾಗರ, ಖಾಜ ಮುಈನುದ್ದೀನ್ ನಾಯಕ್, ಮಕ್ಬೂಲ್ ಶೇಕ್, ಮುನೀರ್ ಹಂಚಿನ ಮನೆ, ಹಾಫಿಝ್ ಫಲಾಹುದ್ದೀನ್, ಸಾದಿಕ್ ಮೌಲಾನಾ, ಸಿರಾಜುದ್ದೀನ್ ಕಿಲ್ಲೆದಾರ್, ಅಬ್ದುಲ್ ರಿಯಾಝ್ ಮಂಗಳೂರು ಮುಂತಾದವರು ಅತಿಥಿಗಳಾಗಿ ಭಾಗವಹಿಸಿದ್ದರು.

ಉಮರುಲ್ ಫಾರೂಖ್ ಮದನಿ ಶಿರಸಿ ಸ್ವಾಗತಿಸಿದರು. ತ್ವಲ್ಹತ್ ಹುದವಿ ಶಿರಸಿ ಕಾರ್ಯಕ್ರಮನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News