ಹಾನಗಲ್: ಸೌಹಾರ್ದ ಮೀಲಾದ್ ಜಾಥಾ

Update: 2024-09-18 09:28 GMT

ಹಾನಗಲ್: ಪ್ರವಾದಿ ಪೈಗಂಬರ್ ಮುಹಮ್ಮದ್ (ಸ.) ರ ಜನ್ಮ ದಿನಾಚರಣೆಯ ಪ್ರಯುಕ್ತ ಆನಿಕೆರೆ ಶಾಫಿ ಜುಮಾ ಮಸೀದಿಯಿಂದ ಹಾನಗಲ್ ಎಂ.ಜಿ.ಸರ್ಕಲ್ ವರೆಗೆ ಮೀಲಾದ್ ಕಾಲ್ನಡಿಗೆ ಜಾಥಾ ಆಯೋಜಿಸಲಾಗಿತ್ತು.

ದಾರುಲ್ ಹುದಾ ಕರ್ನಾಟಕ ಸೆಂಟರ್, ಅಲ್ ಹಿದಾಯ ಎಜುಕೇಶನ್ ಟ್ರಸ್ಟ್ ಹಾಗೂ ಹಾದಿಯ ಎಜುಕೇಶನ್ ಕೌನ್ಸಿಲ್ ಸಹಯೋಗದೊಂದಿಗೆ ಆಯೋಜಿಸಿದ ಜಾಥಾಕ್ಕೆ ವಿದ್ಯಾರ್ಥಿಗಳ ಫ್ಲವರ್ ಶೋ, ದಫ್ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರುಗು ನೀಡಿದವು.

ಜಾಥಾ ಕ್ಯಾಪ್ಟನ್ ಎಚ್.ಕೆ.ಎಚ್. ಹಾಜಿ ಅಬ್ದುಲ್ ಕರೀಂ ಉದ್ಘಾಟಿಸಿದರು. ಜಾಥಾ ಸಂಯೋಜಕರಾದ ಹಾಜಿ ಮುನೀರ್ ಅಹ್ಮದ್, ಮುಹಮ್ಮದ್ ಶರೀಫ್ ಮಂಗಳೂರು ಕಾಲ್ನಡಿಗೆ ಜಾಥಾವನ್ನು ನಿಯಂತ್ರಿಸಿದರು.

ದಾರುಲ್ ಹುದಾ ಪ್ರಾಂಶುಪಾಲ ನಸೀಫ್ ಹುದವಿ, ಉಪ ಪ್ರಾಂಶುಪಾಲ ಅಶ್ರಫ್ ಹುದವಿ, ಪಿ.ಜಿ ಹದೀಸ್ ವಿಭಾಗದ ಮುಖ್ಯಸ್ಥರಾದ ಉನೈಸ್ ಹಿದಾಯ ಹುದವಿ, ಸ್ವಲಾಹುದ್ದೀನ್ ಹುದವಿ, ಆನಿಕೆರೆ ಹಿಫ್ಝ್ ಕಾಲೇಜಿನ ಪ್ರಾಂಶುಪಾಲ ಫಲಾಹ್ ಅಝ್ಹರಿ, ಸಿರಾಜ್ ಹಾನಗಲ್ ಸಂಸ್ಥೆಯ ಪ್ರಾಧ್ಯಾಪಕ ವೃಂದ ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.

ಸಂಸ್ಥೆಯ ವಿದ್ಯಾರ್ಥಿಗಳಿಂದ ಕನ್ನಡ,ಇಂಗ್ಲಿಷ್ ಹಾಗೂ ಉರ್ದು ಭಾಷೆಯಲ್ಲಿ ಸೌಹಾರ್ದ ಭಾಷಣ ಹಾಗೂ ನಅತೇ ಶರೀಫ್ ಆಲಾಪನೆ ನಡೆಸಲಾಯಿತು. ಹಾದಿಯ ಕರ್ನಾಟಕ ಕೊ ಆರ್ಡಿನೇಟರ್ ಮುಈನ್ ಹುದವಿ ಸ್ವಾಗತಿಸಿ ವಂದಿಸಿದರು.

ಹಣ್ಣು ಹಂಪಲುಗಳ ಕಿಟ್ ವಿತರಣೆ: ಮೀಲಾದ್ ಪ್ರಯುಕ್ತ ಎಚ್.ಕೆ.ಎಚ್. ಎಂಟರ್ಪ್ರೈಸಸ್ ವತಿಯಿಂದ ಹಾನಗಲ್ ಪುರಸಭೆ ಪೌರ ಕಾರ್ಮಿಕರು, ಹಾನಗಲ್ ತಾಲೂಕು ಆಸ್ಪತ್ರೆ ಹಾಗೂ ಅಕ್ಕಿ ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಣ್ಣು ಹಂಪಲುಗಳ ಕಿಟ್ ವಿತರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News