ಹಾವೇರಿ: ಮನೆಯ ಮೇಲ್ಛಾವಣಿ ಕುಸಿತ ಪ್ರಕರಣ; ಗಾಯಗೊಂಡಿದ್ದ ವೃದ್ಧೆ ಮೃತ್ಯು

Update: 2024-07-27 06:47 GMT

 ಮೃತ ಮಹಿಳೆ ಯಲ್ಲವ್ವ ಹರಕುಣಿ

ಹಾವೇರಿ: ನಿರಂತರ ಮಳೆ ಹಿನ್ನೆಲೆಯಲ್ಲಿ ಮನೆಯನ ಮೇಲ್ಛಾವಣಿ ಕುಸಿದ ಪರಿಣಾಮ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವ ಘಟನೆ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ನಡೆದಿದೆ.

ಯಲ್ಲವ್ವ ಹರಕುಣಿ (60 ವರ್ಷ) ಮೃತ ಮಹಿಳೆ. ಜುಲೈ 19 ರಂದು ನಡೆದ ಘಟನೆಯಲ್ಲಿ ಮನೆ ಮಂದಿ ರಾತ್ರಿ ಮಲಗಿದ್ದ ವೇಳೆ ಮನೆಯ ಮೇಲ್ಛಾವಣಿ ಕುಸಿದು, ಅವರ ಮೈ ಮೇಲೆಯೇ ಅವಶೇಷಗಳು ಬಿದ್ದಿವೆ. ಇದರಿಂದ  ತಾಯಿ, ಮಕ್ಕಳಿಬ್ಬರು‌ ಮೃತಪಟ್ಟಿದ್ದರು. ಇದೀಗ ಸಾವಿನ ಸಂಖ್ಯೆ ನಾಲ್ಕಕ್ಕೇರಿದೆ.







Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News