ಹಾವೇರಿ: ಎರಡು ಬೈಕ್ ಗಳು ಮುಖಾಮುಖಿ ಢಿಕ್ಕಿ; ಯುವತಿ ಮೃತ್ಯು, ಐವರಿಗೆ ಗಾಯ

Update: 2024-08-14 09:27 GMT

ಹಾವೇರಿ: ಎರಡು ಬೈಕ್ ಗಳು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಯುವತಿಯೊಬ್ಬಳು ಸಾವನ್ನಪ್ಪಿದ್ದು, ಐವರು ಗಾಯಗೊಂಡಿರುವ ಘಟನೆ  ಹಾನಗಲ್ ಹೊರವಲಯದ ಗೊಂದಿ ತಡಸ ರಸ್ತೆಯಲ್ಲಿ ನಡೆದಿದೆ.

 ಮೃತ ಯುವತಿಯನ್ನು ಹಾನಗಲ್ ತಾಲೂಕಿನ ಗಾವಣನ ಗ್ರಾಮದ ನಿವಾಸಿ ಕೀರ್ತಿ ಮಣ್ಣಮ್ಮನವರ್ (21)  ಎಂದು ಗುರುತಿಸಲಾಗಿದೆ.  ಗೆಜ್ಜೆಹಳ್ಳಿ ಗ್ರಾಮದಿಂದ ಹಾನಗಲ್ ಕಡೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದ್ದು, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗಾಯಾಳುಗಳನ್ನು ಮುರಡುರ ಗ್ರಾಮ ನಿವಾಸಿಗಳಾದ ಹನುಮಂತಪ್ಪ (55) , ರಕ್ಷಿತಾ (12), ಅಶ್ವಿತಾ (10), ವಿಜಯ (24) , ಸುಮಾ (23)  ಎಂದು ಗುರುತಿಸಲಾಗಿದೆ. ಇವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ ಹಾನಗಲ್ ‌ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News