ಫಿನ್ಲ್ಯಾಂಡ್: ವಿದ್ಯಾರ್ಥಿಯ ಗುಂಡಿನ ದಾಳಿಯಲ್ಲಿ 3 ಮಕ್ಕಳಿಗೆ ಗಾಯ

Update: 2024-04-02 18:11 GMT

ಹೆಲ್ಸಿಂಕಿ : ದಕ್ಷಿಣ ಫಿನ್ಲ್ಯಾಂಡ್‍ನ ಮಾಧ್ಯಮಿಕ ಶಾಲೆಯಲ್ಲಿ ಮಂಗಳವಾರ 12 ವರ್ಷದ ವಿದ್ಯಾರ್ಥಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಶಾಲೆಯ ಇತರ ಮೂವರು ವಿದ್ಯಾರ್ಥಿಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ.

ರಾಜಧಾನಿ ಹೆಲ್ಸಿಂಕಿಯ ಬಳಿಯ ವಾಂಟಾ ನಗರದಲ್ಲಿನ ಮಾಧ್ಯಮಿಕ ಶಾಲೆಯಲ್ಲಿ (1ರಿಂದ 9ನೇ ತರಗತಿ) ಸುಮಾರು 800 ವಿದ್ಯಾರ್ಥಿಗಳು ಹಾಗೂ 90 ಅಧ್ಯಾಪಕ ಮತ್ತು ಸಿಬಂದಿ ವರ್ಗದವರಿದ್ದಾರೆ. ಬೆಳಿಗ್ಗೆ 9 ಗಂಟೆಗೆ ಶಾಲೆಯ ತರಗತಿಯಲ್ಲಿ ಗುಂಡಿನ ದಾಳಿ ನಡೆದಿರುವ ಮಾಹಿತಿಯಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಶಂಕಿತನನ್ನು ಗನ್ ಸಹಿತ ವಶಕ್ಕೆ ಪಡೆದಿದ್ದಾರೆ. ಶಂಕಿತ ಹಾಗೂ ಗಾಯಗೊಂಡ ವಿದ್ಯಾರ್ಥಿಗಳೂ 12 ವರ್ಷದವರಾಗಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News