ಅಫ್ಘಾನಿಸ್ತಾನ: 30 ನಿಮಿಷಗಳೊಳಗೆ 3 ಪ್ರಬಲ ಭೂಕಂಪನ

Update: 2023-10-07 10:29 GMT

ಸಾಂದರ್ಭಿಕ ಚಿತ್ರ (PTI) 

ಕಾಬೂಲ್: ಕೇವಲ ಅರ್ಧ ಗಂಟೆಯೊಳಗೆ ಅಫ್ಘಾನಿಸ್ತಾನದ ಪಶ್ಚಿಮ ಭಾಗದಲ್ಲಿ ಮೂರು ಪ್ರಬಲ ಭೂಕಂಪಗಳು ಸಂಭವಿಸಿವೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಮಧ್ಯಾಹ್ನ 12:11 ಕ್ಕೆ 6.1 ಮತ್ತು 12:19 ಕ್ಕೆ 5.6 ತೀವ್ರತೆಯ ಭೂಕಂಪನ ಸಂಭವಿಸಿದ್ದು, 12:42 ಕ್ಕೆ 6.2 ರ ತೀವ್ರತೆಯ ಭೂಕಂಪನ ಸಂಭವಿಸಿದೆ.

ಹೆರಾತ್ ನಗರದ ವಾಯುವ್ಯಕ್ಕೆ 40 ಕಿಲೋಮೀಟರ್ ದೂರದಲ್ಲಿ ಭೂಕಂಪನ ಕೇಂದ್ರೀಕರಿಸಿದೆ.

ಆಸ್ತಿಪಾಸ್ತಿಗಳಿಗೆ ಹಾನಿಯಾಗಿರುವ ಹಾಗೂ ಗಾಯಗಳ ಬಗ್ಗೆ ಯಾವುದೇ ವರದಿಗಳು ಇಲ್ಲಿಯವರೆಗೆ ಹೊರಬಂದಿಲ್ಲ.

ಮಂಗಳವಾರ, ಪ್ರಬಲ ನಾಲ್ಕು ಭೂಕಂಪಗಳು ನೇಪಾಳ-ಭಾರತದ ಗಡಿ ಸಮೀಪದಲ್ಲಿ ಸಂಭವಿಸಿತ್ತು. ಅದರ ಅನುಭವವು ದಿಲ್ಲಿ-ಎನ್‌ಸಿಆರ್ ಭಾಗದಲ್ಲೂ ಆಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News