3 ಡ್ರೋನ್ ಹೊಡೆದುರುಳಿಸಿದ ಅಮೆರಿಕದ ಯುದ್ಧನೌಕೆ

Update: 2023-12-04 17:48 GMT

ಸಾಂದರ್ಭಿಕ ಚಿತ್ರ photo:twitter

 

ವಾಷಿಂಗ್ಟನ್: ಕೆಂಪು ಸಮುದ್ರದಲ್ಲಿ ಸಂಚರಿಸುವ ಹಡಗುಗಳನ್ನು ಗುರಿಯಾಗಿಸಿ ರವಿವಾರ ನಡೆಸಲಾದ ಡ್ರೋನ್ ದಾಳಿಗಳನ್ನು ತನ್ನ ಸಮರನೌಕೆ ವಿಫಲಗೊಳಿಸಿದ್ದು ಮೂರು ಡ್ರೋನ್ಗಳನ್ನು ಹೊಡೆದುರುಳಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ.

ಇರಾನ್ ಬೆಂಬಲಿತ ಹೌದಿ ಸಶಸ್ತ್ರ ಹೋರಾಟಗಾರರ ಗುಂಪಿನ ನಿಯಂತ್ರಣದಲ್ಲಿ ಯೆಮನ್ ಪ್ರಾಂತದಿಂದ ಡ್ರೋನ್ ದಾಳಿ ನಡೆಸಲಾಗಿದೆ. ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಉಲ್ಬಣಗೊಂಡ ಬಳಿಕ ಕೆಂಪು ಸಮುದ್ರದಲ್ಲಿ ಇಸ್ರೇಲ್ ಮತ್ತು ಅಮೆರಿಕದ ಹಡಗುಗಳನ್ನು ಗುರಿಯಾಗಿಸಿಕೊಂಡು ಹೌದಿಗಳು ನಡೆಸುತ್ತಿರುವ ಕ್ಷಿಪಣಿ ಮತ್ತು ಡ್ರೋನ್ ದಾಳಿ ಹೆಚ್ಚಿದೆ.

ರವಿವಾರ ಬೆಳಿಗ್ಗೆ ನಡೆದ ಸರಣಿ ಡ್ರೋನ್ ದಾಳಿಯಿಂದ ಈ ಜಲಮಾರ್ಗದಲ್ಲಿ ಸಾಗುತ್ತಿದ್ದ ಹಲವು ವಾಣಿಜ್ಯ ನೌಕೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಅಮೆರಿಕದ `ಕಾರ್ನೆ' ಸಮರನೌಕೆ 3 ಡ್ರೋನ್ಗಳನ್ನು ಹೊಡೆದುರುಳಿಸಿದೆ ಎಂದು ಪೆಂಟಗಾನ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೆಂಪು ಸಮುದ್ರದಲ್ಲಿ ಸಂಚರಿಸುತ್ತಿದ್ದ ಇಸ್ರೇಲ್ನ ಎರಡು ಹಡಗುಗಳನ್ನು ಗುರಿಯಾಗಿಸಿ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಲಾಗಿದೆ. ಕೆಂಪು ಸಮುದ್ರ ಮತ್ತು ಅರಬ್ಬೀ ಸಮುದ್ರದ ಜಲಮಾರ್ಗದ ಮೂಲಕ ಸಾಗುವ ಇಸ್ರೇಲ್ನ ಹಡಗುಗಳನ್ನು ಗುರಿಯಾಗಿಸಿ ನಡೆಸುವ ದಾಳಿ ಮುಂದುವರಿಯಲಿದೆ ಎಂದು ಹೌದಿ ಮಿಲಿಟರಿಯ ವಕ್ತಾರರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News