ಇಸ್ರೇಲ್ ವಿದೇಶಾಂಗ ಸಚಿವರಾಗಿ ಗಿಡಾನ್ ಸಾ'ರ್ ನೇಮಕ

Update: 2024-11-06 16:40 GMT

 ಗಿಡಾನ್ ಸಾ'ರ್ | PC : x/@gidonsaar

ಜೆರುಸಲೇಂ : ಈ ಹಿಂದೆ ಪ್ರಧಾನಿ ನೆತನ್ಯಾಹು ಅವರ ಪ್ರತಿಸ್ಪರ್ಧಿ ಎಂದು ಗುರುತಿಸಿಕೊಂಡಿದ್ದ ಗಿಡಾನ್ ಸಾ'ರ್ ಇಸ್ರೇಲ್‍ನ ನೂತನ ವಿದೇಶಾಂಗ ಸಚಿವರಾಗಿ ನೇಮಕಗೊಂಡಿದ್ದಾರೆ.

ಬೆಂಜಮಿನ್ ನೆತನ್ಯಾಹು ಬಲಪಂಥೀಯ ಪಕ್ಷ ಲಿಕುಡ್ ಪಾರ್ಟಿಯ ನಾಯಕತ್ವ ವಹಿಸುವುದನ್ನು ವಿರೋಧಿಸಿ 2020ರಲ್ಲಿ ಲಿಕುಡ್ ಪಾರ್ಟಿಯನ್ನು ತೊರೆದಿದ್ದ ಗಿಡಾನ್, `ನ್ಯೂ ಹೋಪ್' ಎಂಬ ಪಕ್ಷವನ್ನು ಸ್ಥಾಪಿಸಿದ್ದರು. ಕಳೆದ ವರ್ಷ ಇಸ್ರೇಲ್-ಹಮಾಸ್ ಯುದ್ಧ ಆರಂಭಗೊಂಡ ಬಳಿಕ ಇಸ್ರೇಲ್‍ನ `ಯುದ್ಧಕಾಲದ ತುರ್ತು ಸಚಿವ ಸಂಪುಟ'ಕ್ಕೆ ಸೇರ್ಪಡೆಗೊಂಡಿದ್ದು ಖಾತೆರಹಿತ ಸಚಿವರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News