ಗಾಝಾದಲ್ಲಿ 306 ಯೋಧರ ಮೃತ್ಯು; ಇಸ್ರೇಲ್ ರಕ್ಷಣಾ ಪಡೆ

Update: 2023-10-19 17:21 GMT

Photo : PTI

ಟೆಲ್‍ಅವೀವ್: ಗಾಝಾ ಪಟ್ಟಿಯಲ್ಲಿ 203 ಮಂದಿ ಒತ್ತೆಯಾಳುಗಳಾಗಿ ಇರುವ ಬಗ್ಗೆ ಅವರ ಕುಟುಂಬ ಮಾಹಿತಿ ನೀಡಿದ್ದು ಅಕ್ಟೋಬರ್ 7ರಂದು ಯುದ್ಧ ಆರಂಭವಾದಂದಿನಿಂದ 306 ಯೋಧರು ಮೃತಪಟ್ಟಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ(ಐಡಿಎಫ್) ವಕ್ತಾರ ಡೇನಿಯಲ್ ಹಗರಿ ಹೇಳಿದ್ದಾರೆ.

ಆದರೆ ಈ ಸಂಖ್ಯೆ ಅಂತಿಮವಲ್ಲ, ಅಕ್ಟೋಬರ್ 7ರ ಹಠಾತ್ ಆಕ್ರಮಣದ ಬಳಿಕ ನಾಪತ್ತೆಯಾಗಿರುವವರ ಬಗ್ಗೆ ಮಾಹಿತಿ ಸಂಗ್ರಹ ಮುಂದುವರಿದಿದ್ದು ಒತ್ತೆಯಾಳುಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ ಎಂದವರು ಹೇಳಿದ್ದಾರೆ. ಈ ಮಧ್ಯೆ ದಕ್ಷಿಣ ಗಾಝಾ ಪಟ್ಟಣದಲ್ಲಿ ಮನೆಯೊಂದರ ಮೇಲೆ ಕ್ಷಿಪಣಿ ಅಪ್ಪಳಿಸಿದಾಗ 7 ಸಣ್ಣ ಮಕ್ಕಳು ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಹಾಗೂ ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ ಎಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಸಣ್ಣ ಮಕ್ಕಳ ಮೃತದೇಹಗಳನ್ನು ಆಸ್ಪತ್ರೆಯ ಸ್ಟ್ರೆಚರ್ ಗಳಲ್ಲಿ ಸಾಗಿಸುತ್ತಿರುವ ವೀಡಿಯೊ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News