ನೇಪಾಳದಲ್ಲಿ 6.1 ತೀವ್ರತೆಯ ಭೂಕಂಪನ

Update: 2023-10-22 05:51 GMT

ಸಾಂದರ್ಭಿಕ ಚಿತ್ರ (PTI) 

ಕಠ್ಮಂಡು: ರವಿವಾರ ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ 6.1 ತೀವ್ರತೆಯ ಭೂಕಂಪನ ಸಂಭವಿಸಿದೆ. ಭೂಕಂಪನವು ಬೆಳಗ್ಗೆ 7.39ರಂದು ಸಂಭವಿಸಿದೆ.

ಭೂಕಂಪನದಿಂದ ಯಾವುದೇ ಹಾನಿ ಅಥವಾ ಸಾವು-ನೋವು ಸಂಭವಿಸಿರುವ ಬಗ್ಗೆ ಈವರೆಗೆ ವರದಿಯಾಗಿಲ್ಲ. ಕಠ್ಮಂಡು ಮಾತ್ರವಲ್ಲದೆ, ಇತರ ಜಿಲ್ಲೆಗಳಾದ ಬಾಗ್ಮತಿ ಹಾಗೂ ಗಂಡಕಿ ಪ್ರಾಂತ್ಯಗಳಲ್ಲೂ ಭೂಕಂಪನದ ಅನುಭವವಾಗಿದೆ.

ಅಕ್ಟೋಬರ್ 16ರಂದು, ನೇಪಾಳದ ಸುದುರ್ಪ್‍ಶ್ಚಿಮ್ ಪ್ರಾಂತ್ಯದಲ್ಲಿ 4.8 ತೀವ್ರತೆಯ ಭೂಕಂಪ ಸಂಭವಿಸಿತ್ತು.

ಇದಕ್ಕೂ ಮುನ್ನ 2015ರಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ ಹಾಗೂ ನಂತರದ ಭೂಕಂಪನಗಳಿಂದಾಗಿ ಸುಮಾರು 9,000 ಮಂದಿ ಮೃತಪಟ್ಟಿದ್ದರು.

ಇಡೀ ವಿಶ್ವದಲ್ಲಿ ಅತಿ ಹೆಚ್ಚು ಭೂಕಂಪಕ್ಕೀಡಾಗುವ ದೇಶಗಳ ಪೈಕಿ ನೇಪಾಳ 11ನೆಯ ಸ್ಥಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News