ಅಮೆರಿಕದ ಅಲಾಸ್ಕಾ ಬಳಿ 7.4 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ
Update: 2023-07-16 08:20 GMT
ಹೊಸದಿಲ್ಲಿ: ಅಲಾಸ್ಕಾ ಪೆನಿನ್ಸುಲಾ ಪ್ರದೇಶದಲ್ಲಿ ಇಂದು 7.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (USGS) ತಿಳಿಸಿದೆ.
ಭೂಕಂಪದ ನಂತರ ಅಮೆರಿಕದ ರಾಜ್ಯದ ಕೆಲವು ಪ್ರದೇಶಗಳಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಲಾಯಿತು.
9.3 ಕಿಮೀ (5.78 ಮೈಲುಗಳು) ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು USGS ತಿಳಿಸಿದೆ.
ಅಲಾಸ್ಕಾ ಪೆನಿನ್ಸುಲಾ, ಅಲ್ಯೂಟಿಯನ್ ದ್ವೀಪಗಳು ಮತ್ತು ಕುಕ್ ಇನ್ಲೆಟ್ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಅಲಾಸ್ಕಾ ಭೂಕಂಪ ಕೇಂದ್ರ ತಿಳಿಸಿದೆ.