ಸರಕಾರದ ವಿರುದ್ಧವೇ ಪ್ರಕರಣ ದಾಖಲಿಸಿದ ಸಾಮೂಹಿಕ ಹತ್ಯೆ ಪ್ರಕರಣದ ಆರೋಪಿ !

Update: 2023-08-20 15:18 GMT

ಸಾಂದರ್ಭಿಕ ಚಿತ್ರ

ಓಸ್ಲೊ: ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಅಪರಾಧ ಸಾಬೀತಾಗಿ ಜೈಲಿನಲ್ಲಿರುವ ಕೈದಿಯೊಬ್ಬ ತನ್ನನ್ನು ಜೈಲಿನಲ್ಲಿ ಏಕಾಂತ ಸೆರೆವಾಸದಲ್ಲಿ ಇರಿಸುವ ಮೂಲಕ ಅಧಿಕಾರಿಗಳು ತನ್ನ ಮಾನವ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ ಎಂದು ಸರಕಾರದ ವಿರುದ್ಧವೇ ಪ್ರಕರಣ ದಾಖಲಿಸಿರುವುದಾಗಿ ವರದಿಯಾಗಿದೆ.

ಬಲಪಂಥೀಯ ಸಂಘಟನೆಯ ಕಾರ್ಯಕರ್ತನಾಗಿರುವ ಆ್ಯಂಡ್ರೆಸ್ ಬ್ರೆವಿಕ್ 2011ರ ಜುಲೈಯಲ್ಲಿ ಗುಂಡು ಹಾರಿಸಿ ಮತ್ತು ಬಾಂಬ್ ದಾಳಿಯ ಮೂಲಕ 77 ಮಂದಿಯನ್ನು ಹತ್ಯೆ ಮಾಡಿದ್ದು ಇವರಲ್ಲಿ ಹೆಚ್ಚಿನವರು ಹದಿಹರೆಯದವರು. ಈತನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 21 ವರ್ಷದ ಜೈಲುಶಿಕ್ಷೆ ವಿಧಿಸಲಾಗಿದೆ. `ಆದರೆ ಕಳೆದ ವರ್ಷದಿಂದ, ಜೈಲಿನ ಭದ್ರತಾ ಸಿಬಂದಿ ಹೊರತುಪಡಿಸಿ ಹೊರಗಿನ ಯಾವುದೇ ವ್ಯಕ್ತಿಗಳ ಜತೆ ಸಂಪರ್ಕಕ್ಕೆ ಅವಕಾಶ ನೀಡದೆ ತನ್ನನ್ನು ಏಕಾಂತ ಸೆರೆವಾಸದಲ್ಲಿ ಇಡುವ ಮೂಲಕ ತನ್ನ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ' ಎಂದು ಬ್ರೆವಿಕ್ ಸರಕಾರದ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ. ಜತೆಗೆ ತನಗೆ ಪರೋಲ್ ನೀಡಿ ಬಿಡುಗಡೆಗೊಳಿಸುವಂತೆ ಕೋರಿ ಮತ್ತೊಂದು ಅರ್ಜಿ ದಾಖಲಿಸಿದ್ದಾನೆ ಎಂದು ವರದಿಯಾಗಿದೆ.

ಏಕಾಂತ ಸೆರೆವಾಸದಿಂದ ತನಗೆ ಮುಕ್ತಿ ದೊರೆಯಬೇಕು ಎಂದು ಕೋರಿ ಕಳೆದ ವರ್ಷ ಬ್ರೆವಿಕ್ ಸಲ್ಲಿಸಿದ್ದ ಅರ್ಜಿ ಹಾಗೂ ಪೆರೋಲ್ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸ್ಥಳೀಯ ನ್ಯಾಯಾಲಯ ತಿರಸ್ಕರಿಸಿತ್ತು

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News