7 ದೇಶಗಳಿಂದ ರಾಯಭಾರಿ ವಾಪಾಸು ಕರೆಸಿಕೊಂಡ ಬಾಂಗ್ಲಾ

Update: 2024-08-16 14:08 GMT

PC :X 

ಢಾಕಾ : ಬಾಂಗ್ಲಾದೇಶದ ಮಧ್ಯಂತರ ಸರಕಾರವು ಅಮೆರಿಕ, ರಶ್ಯ, ಜಪಾನ್, ಮಾಲ್ದೀವ್ಸ್, ಜರ್ಮನಿ, ಸೌದಿ ಅರೆಬಿಯಾ ಮತ್ತು ಯುಎಇ ದೇಶಗಳಿಂದ ತನ್ನ ರಾಯಭಾರಿಯನ್ನು ವಾಪಾಸು ಕರೆಸಿಕೊಂಡಿದೆ ಎಂದು ವರದಿಯಾಗಿದೆ.

ದೇಶದ ವಿದೇಶಾಂಗ ಇಲಾಖೆಯು ಆಗಸ್ಟ್ 14ರಂದು ಹೊರಡಿಸಿದ ಆದೇಶದಲ್ಲಿ `ರಾಯಭಾರಿಗಳು ಹಾಗೂ ಹೈಕಮಿಷನರ್ಗಳನ್ನು ಢಾಕಾಕ್ಕೆ ವರ್ಗಾಯಿಸಲಾಗಿದೆ. ಆದ್ದರಿಂದ ಈಗ ನೀವಿರುವ ಸ್ಥಳದಿಂದ ತಕ್ಷಣ ಢಾಕಾಕ್ಕೆ ಹಿಂತಿರುಗಬೇಕು' ಎಂದು ಸೂಚಿಸಲಾಗಿದೆ.

ಹೊಸದಿಲ್ಲಿಯಲ್ಲಿರುವ ಬಾಂಗ್ಲಾ ಹೈಕಮಿಷನ್ನ ಹಲವು ಉದ್ಯೋಗಿಗಳನ್ನೂ ವಾಪಾಸು ಕರೆಸಿಕೊಳ್ಳಲಾಗಿದೆ. ಈ ಮಧ್ಯೆ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಮತ್ತು ಇತರ 9 ಮಂದಿಯ ವಿರುದ್ಧ ದಾಖಲಾಗಿರುವ ನರಮೇಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧ ಆರೋಪಗಳ ಬಗ್ಗೆ ಬಾಂಗ್ಲಾದೇಶದ ಅಂತರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು ತನಿಖೆಯನ್ನು ಆರಂಭಿಸಿದೆ ಎಂದು ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News