ಸ್ಪೆಲ್ಲಿಂಗ್ ಬೀ ಸ್ಪರ್ಧೆ ಗೆದ್ದ ಭಾರತ ಮೂಲದ ಬಾಲಕ

Update: 2024-05-31 17:31 GMT

PC : instagram @Pinkvilla (Bruhat Soma)

ವಾಷಿಂಗ್ಟನ್: ಅಮೆರಿಕದ ರಾಷ್ಟ್ರೀಯ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತೀಯ ಮೂಲದ 12 ವರ್ಷದ ಬಾಲಕ ಬೃಹತ್ ಸೋಮ ಪ್ರಥಮ ಸ್ಥಾನ ಗೆದ್ದ ಸಾಧನೆ ಮಾಡಿದ್ದು, ಮೂರನೇ ಪ್ರಶಸ್ತಿಯೂ ಭಾರತೀಯ ಮೂಲದ ಬಾಲಕರಿಗೆ ಸಂದಿರುವುದು ವಿಶೇಷವಾಗಿದೆ.

ಫ್ಲೋರಿಡಾದ ವಿದ್ಯಾರ್ಥಿಯಾಗಿರುವ ಸೋಮ 90 ಸೆಕೆಂಡುಗಳಲ್ಲಿ 29 ಪದಗಳನ್ನು ಸರಿಯಾಗಿ ಉಚ್ಚರಿಸಿ ಪ್ರಥಮ ಸ್ಥಾನ ಪಡೆದಿದ್ದರೆ ಫೈನಲ್ ಹಂತದಲ್ಲಿದ್ದ ಫೈಝನ್ ಜಾಕಿ 20 ಪದಗಳನ್ನು ಮಾತ್ರ ಉಚ್ಚರಿಸಲು ಸಾಧ್ಯವಾಗಿ ಎರಡನೇ ಸ್ಥಾನ ಪಡೆದಿದ್ದಾನೆ. ಮೂರನೇ ಸ್ಥಾನವನ್ನು ಭಾರತೀಯ ಮೂಲದವರಾದ ಶ್ರೇಯ್ ಪಾರಿಖ್ ಮತ್ತು ಅನನ್ಯಾ ಪ್ರಸನ್ನ ಜಂಟಿಯಾಗಿ ಪಡೆದಿದ್ದಾರೆ.

ಪ್ರಥಮ ಸ್ಥಾನ ಪಡೆದ ಬೃಹತ್ ಸೋಮ 50,000 ಡಾಲರ್(ಸುಮಾರು 41.64 ಲಕ್ಷ ರೂ.) ನಗದು ಬಹುಮಾನದ ಜತೆ ಇತರ ಬಹುಮಾನವನ್ನೂ ಪಡೆದರು. 30 ಪದಗಳಲ್ಲಿ 29ರ ನಿಖರ ಅಕ್ಷರಗಳನ್ನು ಬಿಡಿಸಿ ಹೇಳುವ ಮೂಲಕ ಸ್ಪೆಲಿಂಗ್ ಬೀ ಸ್ಪರ್ಧೆಯ ಇತಿಹಾಸದಲ್ಲಿ ಸೋಮ ಹೊಸ ದಾಖಲೆ ಬರೆದಿದ್ದಾನೆ. ಈತನ ತಂದೆ ಶ್ರೀನಿವಾಸ ಸೋಮ ತೆಲಂಗಾಣ ರಾಜ್ಯದ ನಲ್ಗೊಂಡಾ ಜಿಲ್ಲೆಯವರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News