ಪರಮಾಣು ಸ್ಥಾವರಗಳ ಮೇಲೆ ದಾಳಿ ತಳ್ಳಿಹಾಕುವುದಿಲ್ಲ : ಇಸ್ರೇಲ್

Update: 2024-10-05 18:06 GMT

ಸಾಂದರ್ಭಿಕ ಚಿತ್ರ (PTI)

ಟೆಲ್ ಅವೀವ್ : ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಬಲವಾದ ಪ್ರತಿಕ್ರಿಯೆ ನೀಡಲು ಯೋಜಿಸಲಾಗಿದೆ. ಇರಾನ್‍ನ ಪರಮಾಣು ಸ್ಥಾವರಗಳ ಮೇಲಿನ ದಾಳಿಯನ್ನು ತಳ್ಳಿಹಾಕುವುದಿಲ್ಲ ಎಂದು ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಶನಿವಾರ ಹೇಳಿದೆ.

ಕ್ಷಿಪಣಿ ದಾಳಿಯಲ್ಲಿ ಯಾವುದೇ ಹಾನಿ ವರದಿಯಾಗಿಲ್ಲ. ಯಾವುದೇ ಯುದ್ಧವಿಮಾನ ಅಥವಾ ಪ್ರಮುಖ ಮೂಲಸೌಕರ್ಯಗಳ ಮೇಲೆ ನೇರ ದಾಳಿ ನಡೆದಿಲ್ಲ . ಈ ದಾಳಿಗೆ ಪ್ರತೀಕಾರ `ಗಂಭೀರ ಮತ್ತು ಮಹತ್ವದ್ದಾಗಿರುತ್ತದೆ ಎಂದು ಐಡಿಎಫ್ ಹೇಳಿದೆ. ಪ್ರತೀಕಾರ ದಾಳಿಯ ಸಂದರ್ಭ ಇರಾನ್‍ನ ಪರಮಾಣು ವ್ಯವಸ್ಥೆಗಳನ್ನು ಗುರಿಯಾಗಿಸುವುದಿಲ್ಲ ಎಂದು ಇದುವರೆಗೆ ಇಸ್ರೇಲ್ ಅಮೆರಿಕಕ್ಕೆ ಭರವಸೆ ನೀಡಿಲ್ಲ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್‍ಎನ್ ವರದಿ ಮಾಡಿದೆ.

 

ಇಸ್ರೇಲ್‍ನ ತೈಲ ಸ್ಥಾವರಗಳಿಗೆ ದಾಳಿ : ಇರಾನ್ ಎಚ್ಚರಿಕೆ

  ಒಂದು ವೇಳೆ ಇರಾನ್‍ನ ಪರಮಾಣು ಸ್ಥಾವರಗಳ ಮೇಲೆ ಇಸ್ರೇಲ್ ದಾಳಿ ನಡೆಸುವ ತಪ್ಪು ಹೆಜ್ಜೆ ಇರಿಸಿದರೆ ಅವರ ತೈಲ ಸ್ಥಾವರ ಹಾಗೂ ಅನಿಲ ಸ್ಥಾವರಗಳ ಮೇಲೆ ದಾಳಿ ನಡೆಸುವುದಾಗಿ ಇರಾನ್‍ನ ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾಪ್ರ್ಸ್(ಐಆರ್‍ಜಿಸಿ) ಎಚ್ಚರಿಕೆ ನೀಡಿದೆ.

ಇಸ್ರೇಲ್ ದಾಳಿಯ ಪ್ರಮಾದ ಎಸಗಿದರೆ ಇಸ್ರೇಲ್‍ನ ಮೂರು ಇಂಧನ ಸ್ಥಾವರ ಹಾಗೂ ಅನಿಲ ಸ್ಥಾವರದ ಮೇಲೆ ದಾಳಿ ನಡೆಸಲಾಗುವುದು. ಇರಾನ್ ದೊಡ್ಡ ದೇಶವಾಗಿದ್ದು ಹಲವು ಆರ್ಥಿಕ ಕೇಂದ್ರಗಳಿವೆ. ಆದರೆ ಇಸ್ರೇಲ್ 3 ಇಂಧನ ಸ್ಥಾವರ ಹಾಗೂ ಹಲವು ಅನಿಲ ಸ್ಥಾವರಗಳನ್ನು ಹೊಂದಿದೆ, ನಾವು ಇವುಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸುತ್ತೇವೆ ಎಂದು ಐಆರ್‍ಜಿಸಿಯ ಉಪ ಕಮಾಂಡರ್ ಆಲಿ ಫದಾವಿ ಹೇಳಿದ್ದಾರೆ. ಇದೇ ವೇಳೆ ಇರಾನ್‍ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಲೆಬನಾನ್ ರಾಜಧಾನಿ ಬೈರುತ್‍ಗೆ ಭೇಟಿ ನೀಡಿರುವುದಾಗಿ ವರದಿಯಾಗಿದೆ.


Full View

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News