ಲೆಬನಾನ್ | ಇಸ್ರೇಲ್ ದಾಳಿಯಲ್ಲಿ ಹಮಾಸ್ ಮುಖಂಡ ಸಯೀದ್ ಅತಲ್ಲಾಹ್ ಮೃತ್ಯು

Update: 2024-10-05 18:07 GMT

ಸಾಂದರ್ಭಿಕ ಚಿತ್ರ | PC: x.com/zhang_heqing

ಬೈರುತ್ : ಲೆಬನಾನ್‍ನಲ್ಲಿರುವ ಫೆಲೆಸ್ತೀನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ಡ್ರೋನ್ ದಾಳಿಯಲ್ಲಿ ಹಮಾಸ್‍ನ ಸಶಸ್ತ್ರ ವಿಭಾಗ ಅಲ್-ಕಸ್ಸಾಮ್ ಬ್ರಿಗೇಡ್‍ನ ಸದಸ್ಯ ಸಯೀದ್ ಅತಲ್ಲಾಹ್ ಅಲಿ ಹಾಗೂ ಅವರ ಕುಟುಂಬದ ಮೂವರು ಸದಸ್ಯರು ಸಾವನ್ನಪ್ಪಿರುವುದಾಗಿ ರಾಯ್ಟರ್ಸ್ ವರದಿ ಮಾಡಿದೆ.

ಉತ್ತರ ಲೆಬನಾನ್‍ನ ಬೆಡ್ಡಾವಿಯಲ್ಲಿರುವ ಫೆಲೆಸ್ತೀನ್ ನಿರಾಶ್ರಿತರ ಶಿಬಿರದಲ್ಲಿ ಅತಲ್ಲಾಹ್ ಅಲಿ ಮನೆಯನ್ನು ಗುರಿಯಾಗಿಸಿ ನಡೆದ ಡ್ರೋನ್ ದಾಳಿಯಲ್ಲಿ ಅತಲ್ಲಾ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

Full View

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News