ಇಸ್ಲಾಮಾಬಾದ್ | ಲಾಕ್‍ಡೌನ್, ಸೇನೆ ನಿಯೋಜನೆ

Update: 2024-10-05 21:33 IST
ಇಸ್ಲಾಮಾಬಾದ್ | ಲಾಕ್‍ಡೌನ್, ಸೇನೆ ನಿಯೋಜನೆ

ಸಾಂದರ್ಭಿಕ ಚಿತ್ರ (PTI)

  • whatsapp icon

ಇಸ್ಲಾಮಾಬಾದ್ : ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಅವರ ಬೆಂಬಲಿಗರು ನಡೆಸಲುದ್ದೇಶಿಸಿರುವ ಪ್ರತಿಭಟನಾ ರ‍್ಯಾಲಿಯ ಹಿನ್ನೆಲೆಯಲ್ಲಿ ಶನಿವಾರ ಇಸ್ಲಾಮಾಬಾದ್‍ನಲ್ಲಿ ಲಾಕ್‍ಡೌನ್ ಜಾರಿಗೊಳಿಸಿದ್ದು ಸೇನೆಯನ್ನು ನಿಯೋಜಿಸಿರುವುದಾಗಿ ವರದಿಯಾಗಿದೆ.

ಲಾಹೋರ್‍ನಲ್ಲಿಯೂ ಸೇನೆಯನ್ನು ನಿಯೋಜಿಸಿರುವ ಜತೆಗೆ ಇಂಟರ್‍ನೆಟ್ ಮತ್ತು ಫೋನ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ. ಇಮ್ರಾನ್ ಖಾನ್ ಬಿಡುಗಡೆ, ನ್ಯಾಯಾಂಗದ ಜತೆ ಒಗ್ಗಟ್ಟು ಪ್ರದರ್ಶಿಸಲು ಮತ್ತು ಹಣದುಬ್ಬರದ ವಿರುದ್ಧ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷದ ಬೆಂಬಲಿಗರು ಪ್ರತಿಭಟನೆ ಆಯೋಜಿಸಿದ್ದಾರೆ. ಇಸ್ಲಾಮಾಬಾದ್‍ನಲ್ಲಿ ಅಕ್ಟೋಬರ್ 15 ಮತ್ತು 16ರಂದು ಶಾಂಘೈ ಸಹಕಾರ ಸಂಘಟನೆ(ಎಸ್‍ಸಿಒ) ಶೃಂಗಸಭೆ ನಡೆಯಲಿದ್ದು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸೇನೆಯನ್ನು ಅಕ್ಟೋಬರ್ 5ರಿಂದ 17ರವರೆಗೆ ನಿಯೋಜಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News