ಹೈಟಿ | ಗ್ಯಾಂಗ್ ದಾಳಿಯಲ್ಲಿ ಕನಿಷ್ಠ 70 ಮಂದಿ ಸಾವು

Update: 2024-10-05 15:49 GMT

ಸಾಂದರ್ಭಿಕ ಚಿತ್ರ

ಡೆಲ್ಮಾಸ್ : ಪಶ್ಚಿಮ ಹೈಟಿಯ ಪೊಂಟ್-ಸೊಂಡೆ ನಗರಕ್ಕೆ ನುಗ್ಗಿದ ಕುಖ್ಯಾತ `ಗ್ರ್ಯಾನ್ ಗ್ರಿಫ್' ಗ್ಯಾಂಗ್‍ನ ಸದಸ್ಯರು ಕನಿಷ್ಠ 70 ಮಂದಿಯನ್ನು ಹತ್ಯೆ ಮಾಡಿದ್ದು 6 ಸಾವಿರಕ್ಕೂ ಹೆಚ್ಚು ನಿವಾಸಿಗಳು ನಗರದಿಂದ ಪಲಾಯನ ಮಾಡಿರುವುದಾಗಿ ಪೊಲೀಸರನ್ನು ಉಲ್ಲೇಖಿಸಿ ವರದಿ ಹೇಳಿದೆ.

ಸ್ವಯಂ ಚಾಲಿತ ರೈಫಲ್ಸ್ ಗಳಿಂದ ಸಜ್ಜುಗೊಂಡಿದ್ದ ಗ್ಯಾಂಗ್ ಸದಸ್ಯರು ಹೈಟಿಯ ಪ್ರಮುಖ ಕೃಷಿ ಪ್ರದೇಶವಾದ ಪೊಂಟ್-ಸೊಂಡೆ ನಗರದಲ್ಲಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು 70 ಮಂದಿ ಸಾವನ್ನಪ್ಪಿದ್ದಾರೆ. ಇತರ ಹಲವರು ಗಾಯಗೊಂಡಿದ್ದಾರೆ. `ಗ್ರ್ಯಾನ್ ಗ್ರಿಫ್' ಗ್ಯಾಂಗ್‍ನ ಮುಖಂಡ ಲುಕ್ಸನ್ ಎಲಾನ್ ಹತ್ಯಾಕಾಂಡದ ಹೊಣೆ ವಹಿಸಿಕೊಂಡಿದ್ದು ` ಪೊಲೀಸರು ಹಾಗೂ ಭದ್ರತಾ ಪಡೆಗಳು ತನ್ನ ಗ್ಯಾಂಗಿನ `ಯೋಧರನ್ನು' ಹತ್ಯೆ ಮಾಡಿದಾಗ ನಾಗರಿಕರು ನಿಷ್ಕ್ರಿಯವಾಗಿ ಉಳಿದಿದ್ದಕ್ಕಾಗಿ ಇದು ಪ್ರತೀಕಾರ ಕೃತ್ಯವಾಗಿದೆ' ಎಂದು ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ.

ಗ್ಯಾಂಗ್‍ನ ಸದಸ್ಯರು ಹಲವು ಮನೆಗಳಿಗೆ ಮತ್ತು ವಾಹನಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿದಾಗ 6,270ಕ್ಕೂ ಅಧಿಕ ಜನರು ಪಲಾಯನ ಮಾಡಿ ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಮಾಯಕ ಮಕ್ಕಳು, ಮಹಿಳೆಯರು ಮತ್ತು ಪುರುಷರ ವಿರುದ್ಧದ ಈ ಅಸಹ್ಯ ಅಪರಾಧವು ಬಲಿಪಶುಗಳ ವಿರುದ್ಧ ಮಾತ್ರವಲ್ಲ, ಇಡೀ ಹೈಟಿ ರಾಷ್ಟ್ರದ ವಿರುದ್ಧದ ದಾಳಿಯಾಗಿದೆ. ಈ ಪ್ರದೇಶದಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ' ಎಂದು ಪ್ರಧಾನಿ ಗ್ಯಾರಿ ಕೊನಿಲ್ಲೆ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News