ಬಾಂಗ್ಲಾ | ಆಗಸ್ಟ್ 15ರ ಸಾರ್ವಜನಿಕ ರಜಾದಿನ ರದ್ದು

Update: 2024-08-14 16:20 GMT

ಶೇಖ್ ಮುಜೀಬುರ್ ರೆಹಮಾನ್ | PC : NDTV 

ಢಾಕಾ : ಸಂಸ್ಥಾಪಕ ಶೇಖ್ ಮುಜೀಬುರ್ ರೆಹಮಾನ್ ಅವರ ನಿಧನದ ಸ್ಮರಣಾರ್ಥ ಆಗಸ್ಟ್ 15ರಂದು ಸಾರ್ವಜನಿಕ ರಜೆಯನ್ನು ರದ್ದುಗೊಳಿಸಲಾಗಿದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರ ಘೋಷಿಸಿದೆ.

1975ರ ಆಗಸ್ಟ್ 15ರಂದು ಹತ್ಯೆಯಾದ ಶೇಖ್ ಮುಜೀಬುರ್ ರಹಮಾನ್ ಅವರ ಸ್ಮರಣಾರ್ಥ ಆಗಸ್ಟ್ 15ನ್ನು ರಾಷ್ಟ್ರೀಯ ಶೋಕಾಚರಣೆ ದಿನವನ್ನಾಗಿ ಆಚರಿಸಲಾಗುತ್ತಿತ್ತು. ರಜಾದಿನವನ್ನು ರದ್ದುಗೊಳಿಸುವ ಬಗ್ಗೆ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ನೇತೃತ್ವದ ಸಲಹಾ ಸಮಿತಿ ಹಲವು ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಜತೆ ಚರ್ಚಿಸಿದ ಬಳಿಕ ನಿರ್ಧರಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಈ ಮಧ್ಯೆ, ಆಗಸ್ಟ್ 15ನ್ನು ರಾಷ್ಟ್ರೀಯ ಶೋಕಾಚರಣೆ ದಿನವಾಗಿ ಆಚರಿಸುವಂತೆ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ದೇಶದ ಜನರನ್ನು ಆಗ್ರಹಿಸಿದ್ದಾರೆ. ಅಲ್ಲದೆ ಇತ್ತೀಚಿಗೆ ನಡೆದಿದ್ದ ಮೀಸಲಾತಿ ವಿರೋಧಿ ಪ್ರತಿಭಟನೆ ಸಂದರ್ಭ ಹಲವಾರು ಮಂದಿ ಸಾವನ್ನಪ್ಪಿರುವ ಬಗ್ಗೆ ತನಿಖೆ ನಡೆಸುವಂತೆ ಅವರು ಮಧ್ಯಂತರ ಸರಕಾರವನ್ನು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News