ಬಾಂಗ್ಲಾದೇಶ | ಮಧ್ಯಂತರ ಸರಕಾರ ರಚನೆ : ಸೇನಾ ಪಡೆಗಳ ಮುಖ್ಯಸ್ಥರ ಘೋಷಣೆ
Update: 2024-08-05 15:34 GMT
ಢಾಕಾ : ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶದಿಂದ ತೆರಳಿದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಸೇನಾ ಪಡೆಗಳ ಮುಖ್ಯಸ್ಥ ವಕಾರ್ ಉಝಮಾನ್ `ಸಂಪೂರ್ಣ ಜಬಾವ್ದಾರಿ ವಹಿಸಿ ಮಧ್ಯಂತರ ಸರಕಾರ ರಚಿಸುವುದಾಗಿ' ಘೋಷಿಸಿದ್ದಾರೆ.
ಟಿವಿ ವಾಹಿನಿಯ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಅವರು `ದೇಶವು ಸಾಕಷ್ಟು ನಷ್ಟವನ್ನು ಅನುಭವಿಸಿದೆ. ಆರ್ಥಿಕತೆಗೆ ಹೊಡೆತ ಬಿದ್ದಿದೆ. ಹಲವು ಜನರು ಸಾವನ್ನಪ್ಪಿದ್ದಾರೆ. ಇದು ಹಿಂಸಾಚಾರವನ್ನು ನಿಲ್ಲಿಸುವ ಸಮಯ. ನನ್ನ ಭಾಷಣದ ಬಳಿಕ ಪರಿಸ್ಥಿತಿ ಸುಧಾರಿಸುವುದಾಗಿ ನಿರೀಕ್ಷಿಸುತ್ತೇನೆ' ಎಂದರು.
ಪದಾತಿ ದಳದ ಅಧಿಕಾರಿಯಾಗಿ ವೃತ್ತಿಜೀವನ ಆರಂಭಿಸಿದ್ದ ರಹಮಾನ್, ತಮ್ಮ 4 ದಶಕಗಳ ಸೇವಾವಧಿಯಲ್ಲಿ ಎರಡು ಅವಧಿಯಲ್ಲಿ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಜೂನ್ನಲ್ಲಿ ಸೇನಾಪಡೆಗಳ ಮುಖ್ಯಸ್ಥರಾಗಿ ಪದೋನ್ನತಿಗೊಂಡಿದ್ದರು.