ಗಾಝಾ ಬಿಕ್ಕಟ್ಟು | 'ಕ್ರಿಮಿನಲ್ ಬ್ಲಿಂಕನ್' ಎಂದ ಪತ್ರಕರ್ತನನ್ನು ಹೊರಗೆಳೆದೊಯ್ದ ಭದ್ರತಾ ಸಿಬ್ಬಂದಿ

Update: 2025-01-18 11:44 IST
Photo of Journalist dragged

Screengrab:X/@ryangrim

  • whatsapp icon

ವಾಷಿಂಗ್ಟನ್ : ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್ ಗುರುವಾರ ನಡೆಸಿದ ಅಂತಿಮ ಪತ್ರಿಕಾಗೋಷ್ಠಿಯಲ್ಲಿ, ಗಾಝಾ ಸಂಘರ್ಷದ ಕುರಿತು ಬೈಡೆನ್ ಆಡಳಿತದ ನೀತಿಗಳನ್ನು ಸಮರ್ಥಿಸಿಕೊಳ್ಳುವಾಗ ಅಡ್ಡಿಪಡಿಸಿದ ಪತ್ರಕರ್ತನನ್ನು ಹೊರಗೆಳೆದೊಯ್ದ ಘಟನೆ ನಡೆದಿದೆ. ಅದರ ವಿಡಿಯೋ ವೈರಲ್ ಆಗಿದೆ.

ಫೆಲೆಸ್ತೀನಿನಲ್ಲಿ 15 ತಿಂಗಳಿಗೂ ಹೆಚ್ಚು ಕಾಲ ನಡೆದ ಇಸ್ರೇಲಿ ದಾಳಿಗಳನ್ನು ನಿಲ್ಲಿಸಲು ಖತರ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಒಪ್ಪಂದವನ್ನು ಘೋಷಿಸಿದ ಒಂದು ದಿನದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ, ಸ್ವತಂತ್ರ ಪತ್ರಕರ್ತ ಸ್ಯಾಮ್ ಹುಸೇನಿ ಮತ್ತು ಗ್ರೇಜೋನ್ ನ್ಯೂಸ್ ಸಂಪಾದಕ ಮ್ಯಾಕ್ಸ್ ಬ್ಲುಮೆಂಥಾಲ್ ಬ್ಲಿಂಕನ್ ಅವರನ್ನು ಟೀಕಿಸಿದರು.

"ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ನಿಂದ ಐಸಿಜೆ (ಅಂತರರಾಷ್ಟ್ರೀಯ ನ್ಯಾಯಾಲಯ)ವರೆಗಿನ ಎಲ್ಲರೂ ಇಸ್ರೇಲ್ ನರಮೇಧ ಮಾಡುತ್ತಿದೆ ಎಂದು ಹೇಳುತ್ತಿದ್ದಾರೆ, ಮತ್ತು ನೀವು ಪ್ರಕ್ರಿಯೆಯನ್ನು ಗೌರವಿಸಲು ನನಗೆ ಹೇಳುತ್ತಿದ್ದೀರಾ?" ಹುಸೇನಿ ಅಮೆರಿಕದ ಉನ್ನತ ರಾಜತಾಂತ್ರಿಕರನ್ನು ಪ್ರಶ್ನಿಸಿದರು.

ಕೆಲವು ಕ್ಷಣಗಳ ನಂತರ, ಅವರು "ಕ್ರಿಮಿನಲ್! ನೀವು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ಇರಬೇಕಾದವರು" ಎಂದು ಕೂಗಿದರು. ಕೂಡಲೇ ಭದ್ರತಾ ಸಿಬ್ಬಂದಿಗಳು ಅವರನ್ನು ಸುದ್ದಿಗೋಷ್ಠಿಯ ಕೊಠಡಿಯಿಂದ ಹೊರಗೆಳೆದೊಯ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News