ಭಾರತಕ್ಕೆ ಬರುವ ಪ್ರಯಾಣಿಕರಿಗೆ ವಿಮಾನ ನಿಲ್ದಾಣದ ತಪಾಸಣೆ ಬಿಗಿಗೊಳಿಸಿದ ಕೆನಡಾ
Update: 2024-11-20 17:00 GMT
ಒಟ್ಟಾವ : ಕೆನಡಾದಿಂದ ಭಾರತಕ್ಕೆ ವಿಮಾನದ ಮೂಲಕ ಪ್ರಯಾಣಿಸುವವರು ಈಗ ಹೆಚ್ಚಿನ ಭದ್ರತಾ ತಪಾಸಣೆ ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚಿನ ಮುನ್ನೆಚ್ಚರಿಕೆ ಕ್ರಮವಾಗಿ ಈ ವ್ಯವಸ್ಥೆ ಜಾರಿಗೊಳಿಸಿರುವುದಾಗಿ ಕೆನಡಾದ ಸಾರಿಗೆ ಸಚಿವರನ್ನು ಉಲ್ಲೇಖಿಸಿ ಸಿಬಿಸಿ ನ್ಯೂಸ್ ವರದಿ ಮಾಡಿದೆ.
ವರದಿಗಳ ಪ್ರಕಾರ, ಹೊಸ ಭದ್ರತಾ ವ್ಯವಸ್ಥೆಯ ಬಗ್ಗೆ ಭಾರತಕ್ಕೆ ತೆರಳುವ ಪ್ರಯಾಣಿಕರಿಗೆ ವಾರಾಂತ್ಯದಲ್ಲಿ ಏರ್ ಕೆನಡಾ ಮಾಹಿತಿ ನೀಡಿದೆ. ಹೆಚ್ಚಿನ ತಪಾಸಣಾ ಕ್ರಮಗಳ ಹಿನ್ನೆಲೆಯಲ್ಲಿ ನಿರ್ಗಮನಕ್ಕೆ ಕನಿಷ್ಠ 4 ಗಂಟೆಗಳ ಮೊದಲು ವಿಮಾನ ನಿಲ್ದಾಣಗಳಿಗೆ ಆಗಮಿಸುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.