ಇಸ್ರೇಲ್ ವಿರುದ್ಧ ಪ್ರತೀಕಾರ ತೀರಿಸದಿದ್ದರೆ `ದೈವಿಕ ಕ್ರೋಧ'ದ ಸಾಧ್ಯತೆ : ಖಾಮಿನೈ ಎಚ್ಚರಿಕೆ
Update: 2024-08-15 15:31 GMT
ಟೆಹ್ರಾನ್ : ಹಮಾಸ್ ನಾಯಕ ಇಸ್ಮಾಯೀಲ್ ಹಾನಿಯೆಹ್ ಹತ್ಯೆಗೆ ಇಸ್ರೇಲ್ ವಿರುದ್ಧ ಇರಾನ್ ಪ್ರತೀಕಾರ ತೀರಿಸದಿದ್ದರೆ `ದೈವಿಕ ಕ್ರೋಧ'ಕ್ಕೆ ಕಾರಣವಾಗಬಹುದು ಎಂದು ಇರಾನ್‍ನ ಪರಮೋಚ್ಛ ಮುಖಂಡ ಅಯತುಲ್ಲಾ ಆಲಿ ಖಾಮಿನೈ ಎಚ್ಚರಿಕೆ ನೀಡಿದ್ದಾರೆ.
ಮಿಲಿಟರಿ, ರಾಜಕೀಯ ಅಥವಾ ಆರ್ಥಿಕ ವಿಧಾನಗಳ ಮೂಲಕ ಪ್ರತೀಕಾರ ತೀರಿಸಿಕೊಳ್ಳುವಲ್ಲಿ ಯಾವುದೇ ವೈಫಲ್ಯವು ದೈವಿಕ ಕ್ರೋಧಕ್ಕೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದ ಅವರು, ಇರಾನ್ ವಿರುದ್ಧ ಪ್ರತೀಕಾರ ಕ್ರಮ ಕೈಗೊಳ್ಳದಂತೆ ತಡೆಯುವ `ಶತ್ರುಗಳ ಮಾನಸಿಕ ಯುದ್ಧ'ವನ್ನು ಖಂಡಿಸುವುದಾಗಿ ಹೇಳಿದ್ದಾರೆ. `ಇಂದಿನ ಪ್ರಬಲ ಶಕ್ತಿಗಳ ಒತ್ತಡ, ಬೇಡಿಕೆಗಳಿಗೆ ಮಣಿಯುವ ಸರಕಾರಗಳು ತಮ್ಮ ಜನರ ಶಕ್ತಿಯನ್ನು ಮತ್ತು ವಿರೋಧಿಗಳ ಉತ್ಪ್ರೇಕ್ಷಿತ ಸಾಮರ್ಥ್ಯವನ್ನು ಸರಿಯಾಗಿ ಅಂದಾಜಿಸಿದರೆ ಈ ಒತ್ತಡವನ್ನು ಧಿಕ್ಕರಿಸಬಹುದು' ಎಂದು ಖಾಮಿನೈ ಹೇಳಿರುವುದಾಗಿ ವರದಿಯಾಗಿದೆ.