ಹಮಾಸ್ ನಿಂದ ಚೀನಾದ ಶಸ್ತ್ರಾಸ್ತ್ರ ಬಳಕೆ: ಇಸ್ರೇಲ್ ಹೇಳಿಕೆ

Update: 2024-01-06 18:04 GMT

Image Source : PTI

ಟೆಲ್ಅವೀವ್: ಹಮಾಸ್ ಹೋರಾಟಗಾರರು ಚೀನಾದ ಶಸ್ತ್ರಾಸ್ತ್ರಗಳನ್ನು ಬಳಸುತ್ತಿರುವುದು ಗಾಝಾದಲ್ಲಿನ ಹಮಾಸ್ ನೆಲೆಗಳಲ್ಲಿ ಪತ್ತೆಯಾದ ಶಸ್ತ್ರಾಸ್ತ್ರಗಳ ಪರಿಶೀಲನೆಯಲ್ಲಿ ದೃಢಪಟ್ಟಿದೆ ಎಂದು ಇಸ್ರೇಲ್ ಪ್ರತಿಪಾದಿಸಿದೆ.

ಹೈಟೆಕ್ ರೈಫಲ್ ಗಳು, ಕಾಟ್ರ್ರಿಡ್ಜ್ ಗಳು, ಗ್ರೆನೇಡ್ ಲಾಂಚರ್ಗಳು, ಆಲಿಸುವ ಸಾಧನಗಳು, ಕಾರ್ಯತಂತ್ರದ ಮಿಲಿಟರಿ ರೇಡಿಯೋ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಬೃಹತ್ ಸಂಗ್ರಹವನ್ನು ಗಾಝಾದಲ್ಲಿ ಇಸ್ರೇಲ್ ಭದ್ರತಾ ಪಡೆ ಪತ್ತೆಹಚ್ಚಿದ್ದು ಇವು ಚೀನೀ ನಿರ್ಮಿತ ಶಸ್ತ್ರಾಸ್ತ್ರಗಳು. ಹಮಾಸ್‌ ನ ಕೈಸೇರಿರುವುದು ಕಳವಳದ ವಿಷಯವಾಗಿದೆ ಎಂದು ಇಸ್ರೇಲ್ ಹೇಳಿದೆ.

ಯುದ್ಧಕ್ಕೂ ಮೊದಲು ಚೀನಾದ ಜತೆಗಿನ ನಮ್ಮ ಸಂಬಂಧ ಉತ್ತಮವಾಗಿದ್ದರಿಂದ ಇದು ಆಶ್ಚರ್ಯದ ವಿಷಯವಾಗಿದೆ. ಈ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಚೀನಾದಿಂದ ನೇರವಾಗಿ ಹಮಾಸ್ ಕೈಸೇರಿವೆಯೇ ಎಂಬುದು ಇಲ್ಲಿರುವ ಪ್ರಶ್ನೆಯಾಗಿದೆ. ಈ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹಮಾಸ್ ಅಕ್ಟೋಬರ್ 7ರ ದಾಳಿಗೆ ಬಳಸಿರುವ ಸಾಧ್ಯತೆಯಿದೆ.

ಈ ಶಸ್ತ್ರಾಸ್ತ್ರಗಳು ಹಮಾಸ್‌ ಗೆ ಹೋಗುತ್ತಿವೆ ಎಂಬುದು ಚೀನಾಕ್ಕೆ ತಿಳಿದಿತ್ತೇ ಅಥವಾ ಇರಾನ್ ನಂತಹ ಮೂರನೇ ದೇಶಗಳ ಮೂಲಕ ಹಮಾಸ್ ಕೈ ಸೇರಿರಬಹುದೇ? ಈ ರೀತಿ ಅಗಾಧ ಪ್ರಮಾಣದ ಶಸ್ತ್ರಾಸ್ತ್ರ ಹಮಾಸ್‌ ಗೆ ದೊರಕಬೇಕಿದ್ದರೆ ದೇಶವೊಂದರ ಪಾತ್ರ ಇರಲೇಬೇಕು ಮತ್ತು ಆ ದೇಶ ಇರಾನ್ ಆಗಿರಬಹುದು. ಇರಾನ್ಗೆ ಒದಗಿಸಿದ ಶಸ್ತ್ರಾಸ್ತ್ರಗಳು ಈ ರೀತಿ ಬಳಕೆಯಾಗುವುದು ಚೀನಾಕ್ಕೆ ಇಷ್ಟವಾಗಲಿಕ್ಕಿಲ್ಲ' ಎಂದು ಇಸ್ರೇಲ್ ನ ಗುಪ್ತಚರ ಇಲಾಖೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News