2 ಕೋಟಿ ರೂ. ಪರಿಹಾರ ನಿರಾಕರಿಸಿದ ವೃದ್ಧ: ಮನೆಯ ಸುತ್ತಲೇ ಹೆದ್ದಾರಿ ನಿರ್ಮಿಸಿದ ಚೀನಾ ಸರಕಾರ!

Update: 2025-01-27 17:16 IST
2 ಕೋಟಿ ರೂ. ಪರಿಹಾರ ನಿರಾಕರಿಸಿದ ವೃದ್ಧ: ಮನೆಯ ಸುತ್ತಲೇ ಹೆದ್ದಾರಿ ನಿರ್ಮಿಸಿದ ಚೀನಾ ಸರಕಾರ!
PC : X \ @IbraHasan_
  • whatsapp icon

ಬೀಜಿಂಗ್: ಚೀನಾದಲ್ಲಿ ಹೆದ್ದಾರಿ ನಿರ್ಮಿಸಲು ವೃದ್ಧರೊಬ್ಬರು ತನ್ನ ಮನೆಯನ್ನು ಮಾರಾಟ ಮಾಡಲು ನಿರಾಕರಿಸಿದ್ದರಿಂದ, ಅವರೀಗ ಸರಕಾರ ನಿರ್ಮಿಸಿರುವ ಹೆದ್ದಾರಿನ ನಡುವೆ ವಾಸಿಸುವಂತಾಗಿದೆ.

ಚೀನಾದ ಜಿಂಕ್ಸಿಯಲ್ಲಿ ಎರಡು ಅಂತಸ್ತಿನ ಮನೆ ಹೊಂದಿರುವ ಹ್ವಾಂಗ್ ಪಿಂಗ್, ತನ್ನ ಮನೆಯ ಸುತ್ತ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಹಾಗೂ ಅದರಿಂದ ಉಂಟಾಗುತ್ತಿರುವ ದೂಳು ಹಾಗೂ ಸದ್ದಿನಿಂದ, ತಾನು 180,000 ಯೂರೊ (ಅಂದಾಜು 2 ಕೋಟಿ ರೂ.) ಪರಿಹಾರ ನಿರಾಕರಿಸಿದ್ದಕ್ಕೆ ಪಶ್ಚಾತ್ತಾಪ ಪಡುವಂತಾಗಿದೆ.

ಒಮ್ಮೆ ಈ ಎಕ್ಸ್ ಪ್ರೆಸ್ ಹೆದ್ದಾರಿ ಮುಕ್ತಗೊಂಡರೆ, ನನ್ನ ಮನೆಯ ಪರಿಸ್ಥಿತಿ ಏನಾಗಬಹುದು ಆತಂಕಗೊಂಡಿರುವ ಹ್ವಾಂಗ್, ಚೀನಾ ಸರಕಾರ ತನಗೆ ನೀಡಲು ಮುಂದಾಗಿದ್ದ ಪರಿಹಾರ ಸಕಾರಣವಾಗಿತ್ತು ಎಂದು ಹೇಳತೊಡಗಿದ್ದಾರೆ. “ನಾನು ಹಿಂದಿರುಗಿ ನೋಡಿದಾಗ, ಅವರು ನನ್ನ ಮುಂದಿಟ್ಟಿದ್ದ ಶರತ್ತುಗಳನ್ನು ಒಪ್ಪಿಕೊಳ್ಳಬಹುದಿತ್ತು ಎನಿಸುತ್ತಿದೆ.” ಎಂದು ಅವರು ವಿಷಾದ ವ್ಯಕ್ತಪಡಿಸುತ್ತಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆಯಾಗಿರುವ ವಿಡಿಯೊದಲ್ಲಿ, ಎರಡು ಅಂತಸ್ತಿನ ಮನೆಯೊಂದು ಬೃಹತ್ ಗಾತ್ರದ ಹೆದ್ದಾರಿಯಿಂದ ಸುತ್ತುವರಿದಿದ್ದು, ಹ್ವಾಂಗ್ ನಿವಾಸದ ತಾರಸಿಯು ಬಹುತೇಕ ಎರಡು ಪಥದ ಹೆದ್ದಾರಿಯ ಸಮಕ್ಕಿರುವುದು ಕಂಡು ಬರುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News