ಕೊಲಂಬಿಯಾ ಭೂ ಕುಸಿತ: ಮೃತರ ಸಂಖ್ಯೆ 33ಕ್ಕೆ ಏರಿಕೆ

Update: 2024-01-15 17:49 GMT

Photo: deccanherald.com

ಬೊಗೊಟ: ಪಶ್ಚಿಮ ಕೊಲಂಬಿಯಾದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 33ಕ್ಕೇರಿದೆ. ಮಣ್ಣಿನಡಿ ಸಿಲುಕಿ ಗಾಯಗೊಂಡಿದ್ದ ಕನಿಷ್ಟ 35 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೂ ಹಲವರು ನಾಪತ್ತೆಯಾಗಿದ್ದು ಶೋಧ ಮತ್ತು ರಕ್ಷಣೆ ಕಾರ್ಯ ಮುಂದುವರಿದಿದೆ ಎಂದು ಸರಕಾರದ ಮೂಲಗಳು ಹೇಳಿವೆ.

ಕ್ವಿಬ್ಡೊ ಮತ್ತು ಮೆಡೆಲಿನ್ ನಗರಗಳನ್ನು ಸಂಪರ್ಕಿಸುವ ಪರ್ವತ ಪ್ರದೇಶದಲ್ಲಿ ಸಾಗುವ ಹೆದ್ದಾರಿಯ ಬಳಿಯ ಮಣ್ಣು ಕುಸಿದು ದುರಂತ ಸಂಭವಿಸಿದೆ. ಪರ್ವತದಿಂದ ಏಕಾಏಕಿ ಮಣ್ಣು ಕುಸಿದಾಗ ರಸ್ತೆಯಲ್ಲಿ ಸಾಗುತ್ತಿದ್ದ ವಾಹನಗಳು ಮಣ್ಣಿನಡಿ ಮುಚ್ಚಿಹೋಗಿವೆ. ಮೃತಪಟ್ಟವರಲ್ಲಿ ಹಲವು ಮಕ್ಕಳೂ ಸೇರಿದ್ದು ಈ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆ ದುರಂತಕ್ಕೆ ಕಾರಣವಾಗಿರಬಹುದು. ಮಳೆ ಮುಂದುವರಿದಿರುವುದರಿಂದ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ ಎಂದು ಕೊಲಂಬಿಯಾ ಉಪಾಧ್ಯಕ್ಷೆ ಫ್ರಾನ್ಸಿಯಾ ಮಾಕ್ರ್ವೆಝ್ ಟ್ವೀಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News