ಉಕ್ರೇನ್ ಸೈನಿಕರನ್ನು ಸಾಗಿಸುತ್ತಿದ್ದ 4 ದೋಣಿಗಳ ನಾಶ: ರಶ್ಯ
Update: 2023-08-30 17:57 GMT
ಮಾಸ್ಕೊ: ಕಪ್ಪು ಸಮುದ್ರದಲ್ಲಿ ಸುಮಾರು 50 ಸೈನಿಕರನ್ನು ಸಾಗಿಸುತ್ತಿದ್ದ ಉಕ್ರೇನ್ ನ 4 ದೋಣಿಗಳನ್ನು ನಾಶಪಡಿಸಿರುವುದಾಗಿ ರಶ್ಯ ಬುಧವಾರ ಹೇಳಿದೆ.
ಮಂಗಳವಾರ ಮಧ್ಯರಾತ್ರಿ ಕಪ್ಪು ಸಮುದ್ರದ ಮೂಲಕ ಉಕ್ರೇನ್ ನ ವಿಶೇಷ ಕಾರ್ಯಪಡೆಯ ತುಕಡಿಯನ್ನು ಸಾಗಿಸುತ್ತಿದ್ದ 4 ಹೈಸ್ಪೀಡ್ ಮಿಲಿಟರಿ ದೋಣಿಗಳನ್ನು ನಮ್ಮ ಯುದ್ಧವಿಮಾನ ನಾಶಗೊಳಿಸಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿದೆ.
ಈ ಮಧ್ಯೆ, ಪಶ್ಚಿಮ ರಶ್ಯದ ಪೆಸ್ಕೋವ್ ನಗರದ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ನಡೆದ ಡ್ರೋನ್ ದಾಳಿಯನ್ನು ಹಿಮ್ಮೆಟ್ಟಿಸಲಾಗಿದೆ. ದಾಳಿಯಲ್ಲಿ 4 ಸಾರಿಗೆ ವಿಮಾನಗಳಿಗೆ ಹಾನಿಯಾಗಿದೆ. ಆದರೆ ಯಾವುದೇ ಪ್ರಾಣಹಾನಿ ಅಥವಾ ಗಾಯ ಸಂಭವಿಸಿಲ್ಲ ಎಂದು ಪೆಸ್ಕೋವ್ ನಗರದ ಗವರ್ನರ್ ಮಿಖಾಯಿಲ್ ವೆಡೆರ್ನಿಕೋವ್ ಹೇಳಿದ್ದಾರೆ.