ಯುದ್ಧದ ಉದ್ವಿಗ್ನತೆಯನ್ನು ಹೆಚ್ಚಿಸಬೇಡಿ: ರಶ್ಯಕ್ಕೆ ಟರ್ಕಿ ಆಗ್ರಹ
Update: 2023-08-02 17:57 GMT
ಅಂಕಾರ: ಉಕ್ರೇನ್ ಯುದ್ಧದ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಬೇಡಿ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರನ್ನು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೋಗನ್ ಆಗ್ರಹಿಸಿದ್ದಾರೆ.
ಬುಧವಾರ ಪುಟಿನ್‌ಗೆ ದೂರವಾಣಿ ಕರೆ ಮಾಡಿದ ಎರ್ಡೋಗನ್ ‘ಆಹಾರ ಧಾನ್ಯ ಒಪ್ಪಂದವು ಶಾಂತಿಗಾಗಿ ಸೇತುವೆಯಾಗಿದೆ. ಈ ಒಪ್ಪಂದವನ್ನು ದೀರ್ಘಾವಧಿಗೆ ಅಮಾನತಿನಲ್ಲಿಡುವುದರಿಂದ ಯಾರಿಗೂ ಪ್ರಯೋಜನವಾಗದು.
ಆಹಾರದ ನೆರವನ್ನು ಎದುರು ನೋಡುತ್ತಿರುವ ದೇಶಗಳಿಗೆ ಸಮಸ್ಯೆಯಾಗಲಿದೆ. ಆಹಾರ ಧಾನ್ಯ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಶೇ.23ದಷ್ಟು ಇಳಿಕೆಯಾಗಿದ್ದ ಆಹಾರಧಾನ್ಯದ ಬೆಲೆ ಒಪ್ಪಂದ ಅಮಾನತುಗೊಂಡ ಬಳಿಕ ಶೇ.15ದಷ್ಟು ಏರಿಕೆಯಾಗಿದೆ’ ಎಂದು ಹೇಳಿರುವುದಾಗಿ ಟರ್ಕಿ ಮಾಧ್ಯಮಗಳು ವರದಿ ಮಾಡಿವೆ.