ಚೀನಾದಲ್ಲಿ ಭೂಕಂಪ: 21 ಮಂದಿಗೆ ಗಾಯ

Update: 2023-08-06 17:18 GMT

ಸಾಂದರ್ಭಿಕ ಚಿತ್ರ (PTI)

ಚೀನಾದಲ್ಲಿ ಭೂಕಂಪ: 21 ಮಂದಿಗೆ ಗಾಯ

ಬೀಜಿಂಗ್: ರವಿವಾರ ಬೆಳಿಗ್ಗೆ ಪೂರ್ವ ಚೀನಾದಲ್ಲಿ 5.4 ತೀವ್ರತೆಯ ಭೂಕಂಪ ಸಂಭವಿಸಿದ್ದು ಕನಿಷ್ಟ 21 ಮಂದಿ ಗಾಯಗೊಂಡಿದ್ದಾರೆ. ಹಲವು ಕಟ್ಟಡಗಳು ಹಾಗೂ ಮನೆಗಳು ಕುಸಿದುಬಿದ್ದಿವೆ ಎಂದು ವರದಿಯಾಗಿದೆ.

ಶಾಂಡಾಂಗ್ ಪ್ರಾಂತದ ದೆಝೊವು ನಗರದ ದಕ್ಷಿಣಕ್ಕೆ 26 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದ್ದು ಭೂಕಂಪ ನೆಲದಡಿ 10 ಕಿ.ಮೀ ಆಳದಲ್ಲಿ ಕೇಂದ್ರೀಕೃತಗೊಂಡಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಇಲಾಖೆ ವರದಿ ಮಾಡಿದೆ.

ಈ ಪ್ರಾಂತದಲ್ಲಿ ಇತ್ತೀಚಿನ ದಶಕಗಳಲ್ಲಿ ಸಂಭವಿಸಿದ ಅತ್ಯಂತ ತೀವ್ರ ಭೂಕಂಪ ಇದಾಗಿತ್ತು. ಭೂಕಂಪದ ಕೇಂದ್ರಬಿಂದುಗಿಂತ 800 ಕಿ.ಮೀ ದೂರದಲ್ಲಿರುವ ಶಾಂಘೈ, ಬೀಜಿಂಗ್ ಹಾಗೂ ತಿಯಾನ್ಜಿನ್ ನಗರಗಳಲ್ಲೂ ನೆಲ ನಡುಗಿದ ಅನುಭವವಾಗಿದೆ ಎಂದು ಸರಕಾರಿ ಸ್ವಾಮ್ಯದ `ದಿ ಗ್ಲೋಬಲ್ ಟೈಮ್ಸ್' ವರದಿ ಮಾಡಿದೆ.

ಭೂಕಂಪದ ಬಳಿಕ 52 ಪಶ್ಚಾತ್ಕಂಪನ ಸಂಭವಿಸಿದ್ದು 126 ಮನೆ ಹಾಗೂ ಕಟ್ಟಡಗಳು ಕುಸಿದುಬಿದ್ದಿವೆ. ಕನಿಷ್ಟ 21 ಮಂದಿ ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ.

ಮೊರಕ್ಕೊ: ಬಸ್ಸು ಅಪಘಾತ ; 24 ಮಂದಿ ಮೃತ್ಯು

ಮೊರಕ್ಕೋದ ಕೇಂದ್ರ ಪ್ರಾಂತದ ಅಝಿಲಾಲ್ನಲ್ಲಿ ರವಿವಾರ ನಡೆದ ಬಸ್ಸು ಅಪಘಾತದಲ್ಲಿ 24 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಡೆಮ್ನೇಟ್ನ ವಾರದ ಮಾರುಕಟ್ಟೆಗೆ ತೆರಳುತ್ತಿದ್ದ ಪ್ರಯಾಣಿಕರಿದ್ದ ಮಿನಿಬಸ್ಸು ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದು ದುರಂತ ಸಂಭವಿಸಿದೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News