ಪಾಕಿಸ್ತಾನದಲ್ಲಿ ಲಘು ಭೂಕಂಪ
Update: 2023-07-07 03:44 GMT
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ಪ್ರಕಟಿಸಿದೆ. ಸುಮಾರು 170 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂಧು ಎನ್‍ಸಿಎಸ್ ಹೇಳಿದೆ.
ಮುಂಜಾಣೆ 5:11:28ಕ್ಕೆ ಭೂಕಂಪ ಸಂಭವಿಸಿದ್ದು, ಇದರ ಕೇಂದ್ರ ಬಿಂದು 31.22 ಅಕ್ಷಾಂಶ ಹಾಗೂ 70.12 ರೇಖಾಂಶದಲ್ಲಿತ್ತು ಎಂದು ಎನ್‍ಸಿಎಸ್ ಟ್ವೀಟ್ ಮಾಡಿದೆ.
ಇದುವರೆಗೆ ಯಾವುದೇ ಹಾನಿ ಅಥವಾ ಸಾವು ನೋವು ವರದಿಯಾಗಿಲ್ಲ.