ಬಗ್ದಾದ್ ನಲ್ಲಿ ಸ್ವಿಝರ್ಲ್ಯಾಂಡ್ ರಾಯಭಾರ ಕಚೇರಿ ಪುನರಾರಂಭ

Update: 2024-09-03 16:40 GMT

ಸಾಂದರ್ಭಿಕ ಚಿತ್ರ

ಬರ್ನ್ : ಇರಾಕ್ ರಾಜಧಾನಿ ಬಗ್ದಾದ್‍ನಲ್ಲಿ 33 ವರ್ಷಗಳ ಬಳಿಕ ಸ್ವಿಝರ್ಲ್ಯಾಂಡ್ ತನ್ನ ರಾಯಭಾರ ಕಚೇರಿಯನ್ನು ಪುನರಾರಂಭಿಸಿದೆ. 1991ರ ಗಲ್ಫ್ ಯುದ್ಧದ ಕಾರಣದಿಂದಾಗಿ ಇರಾಕ್‍ನಲ್ಲಿನ ತನ್ನ ರಾಯಭಾರ ಕಚೇರಿಯನ್ನು ಸ್ವಿಝರ್ಯ್ಲಾಂಡ್ ಮುಚ್ಚಿತ್ತು.

`ರಾಯಭಾರ ಕಚೇರಿಯನ್ನು ಪುನಃ ತೆರೆಯುವ ಮೂಲಕ ಇರಾಕ್ ಜತೆಗಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಗುರಿಯನ್ನು ಮತ್ತು ಆರ್ಥಿಕ, ಭದ್ರತೆ ಮತ್ತು ವಲಸೆ ವಿಷಯಗಳಲ್ಲಿ ಸಹಕಾರವನ್ನು ಗಾಢವಾಗಿಸುವ ಉದ್ದೇಶ ಹೊಂದಿದ್ದೇವೆ' ಎಂದು ಸ್ವಿಝರ್ಲ್ಯಾಂಡ್ ವಿದೇಶಾಂಗ ಇಲಾಖೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News