Fact Check - ಸಿರಿಯಾದ ಹಳೆಯ ವೀಡಿಯೊವನ್ನು 'ಹಮಾಸ್ ಇಸ್ರೇಲಿ ಸೈನಿಕರನ್ನು ಜೀವಂತವಾಗಿ ಸುಡುತ್ತಿದೆ' ಎಂದು ವೈರಲ್

Update: 2023-10-20 17:03 GMT

Photo: thequint.com

ಹೊಸದಿಲ್ಲಿ : ಇಬ್ಬರು ಸಮವಸ್ತ್ರಧಾರಿಗಳನ್ನು ಪಂಜರದಿಂದ ಎಳೆದೊಯ್ದು ನಂತರ ಬೆಂಕಿ ಹಚ್ಚುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಮಾಸ್ ಹೋರಾಟಗಾರರು ಇಬ್ಬರು ಇಸ್ರೇಲಿ ಸೈನಿಕರನ್ನು ಜೀವಂತವಾಗಿ ಸುಟ್ಟು ಹಾಕಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ ಎಂದು thequint.com ವರದಿ ಮಾಡಿದೆ.

ವಾಸ್ತವವಾಗಿ, 2016 ರಲ್ಲಿ ಸಿರಿಯಾದಲ್ಲಿ ನಡೆದ ಘಟನೆಗೆ ಸಂಬಂಧಿಸಿದ ವೀಡಿಯೊ ಅದಾಗಿದ್ದು, ಐಸಿಸ್ ಉಗ್ರರು ಟರ್ಕಿಯ ಸೈನಿಕರನ್ನು ಜೀವಂತವಾಗಿ ಸುಡುತ್ತಿರುವುದು ಆ ವೀಡಿಯೊದಲ್ಲಿ ಕಾಣಬಹುದು.

 

ಉತ್ತರ ಸಿರಿಯಾದಲ್ಲಿ "ಅಲೆಪ್ಪೊ ಪ್ರಾಂತ್ಯ" ದಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾದ 19 ನಿಮಿಷಗಳ ವೀಡಿಯೊವನ್ನು ಇಸ್ಲಾಮಿಕ್ ಸ್ಟೇಟ್ (ISIS) ಗುಂಪು ಬಿಡುಗಡೆ 2016 ರಲ್ಲಿ ಬಿಡುಗಡೆ ಮಾಡಿತ್ತು. ಈಗ ಆ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಮಾಸ್ - ಇಸ್ರೇಲಿ ಯುದ್ದಕ್ಕೆ ಸಂಬಂಧಿಸಿದ್ದು ಎಂದು ತಪ್ಪಾಗಿ ವೈರಲ್ ಆಗುತ್ತಿದೆ.

 

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News