ಬಿಹಾರದಿಂದ ನಕಲಿ ಪದವಿ ಪ್ರಮಾಣ ಪತ್ರ: ನೇಪಾಳ ಸಂಸದ ಬಂಧನ
Update: 2023-08-11 16:56 GMT
ಕಠ್ಮಂಡು: ಬಿಹಾರದಿಂದ ನಕಲಿ ಪದವಿ ಪ್ರಮಾಣ ಪತ್ರ ಪಡೆದು, ಅದನ್ನು ಚೀನಾದಲ್ಲಿ ಉನ್ನತ ಶಿಕ್ಷಣ ಪಡೆಯಲು ಬಳಸಿಕೊಂಡ ಆರೋಪದಲ್ಲಿ ನೇಪಾಳದ ಸಂಸದ ಸುನಿಲ್ ಕುಮಾರ್ ಶರ್ಮರನ್ನು ಬಂಧಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಆಡಳಿತಾರೂಢ ನೇಪಾಳಿ ಕಾಂಗ್ರೆಸ್ ಸಂಸದ ಶರ್ಮ ವೈದ್ಯಕೀಯ ಕಾಲೇಜು ಸಹಿತ ಹಲವು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ. ಕಳೆದ ತಿಂಗಳು ಅಧಿಕಾರಿಗಳು ವಶಕ್ಕೆ ಪಡೆದಿದ್ದ 100 ಕಿ.ಗ್ರಾಂ. ಚಿನ್ನವನ್ನು ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಗೃಹ ಸಚಿವ ನಾರಾಯಣ ಕಾಜಿ ಶ್ರೇಷ್ಟ ಮತ್ತು ವಿತ್ತಸಚಿವ ಪ್ರಕಾಶ್ ಶರಣ್ ಮಹಾತ್ ರಾಜೀನಾಮೆ ನೀಡಬೇಕೆಂದು ಶರ್ಮ ಆಗ್ರಹಿಸಿದ ಕೆಲ ದಿನಗಳಲ್ಲೇ ನಡೆದಿರುವ ಈ ಬೆಳವಣಿಗೆ ಸಮ್ಮಿಶ್ರ ಸರಕಾರದಲ್ಲಿ ಬಿರುಕು ಮೂಡಿಸುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.