ಜಪಾನ್‍ನಲ್ಲಿ ಹರಡುತ್ತಿದೆ `ಮಾಂಸ ತಿನ್ನುವ ಬ್ಯಾಕ್ಟೀರಿಯಾ'!

Update: 2024-06-15 15:36 GMT

PC : NDTV 

ಟೋಕಿಯೊ : ಕೋವಿಡ್ ಸಂಬಂಧಿಸಿದ ನಿರ್ಬಂಧಗಳನ್ನು ಸಡಿಲಿಸಿದ ಬಳಿಕ ಜಪಾನ್‍ನಲ್ಲಿ ಎರಡು ದಿನಗಳೊಳಗೆ ಜನರನ್ನು ಕೊಲ್ಲಬಹುದಾದ ಅಪರೂಪದ ಮಾಂಸ ತಿನ್ನುವ ಬ್ಯಾಕ್ಟೀರಿಯಾ ವೇಗವಾಗಿ ಹರಡುತ್ತಿರುವುದಾಗಿ ವರದಿಯಾಗಿದೆ.

ಈ ವರ್ಷದ ಜೂನ್ 2ರವರೆಗೆ ದೇಶದಲ್ಲಿ `ಸ್ಟ್ರೆಪ್ಟೊಕೊಕಲ್ ಟಾಕ್ಸಿಕ್ ಶಾಕ್ ಸಿಂಡ್ರೋಮ್(ಎಸ್‍ಟಿಎಸ್‍ಎಸ್)ನ ಪ್ರಕರಣ 977ಕ್ಕೆ ಹೆಚ್ಚಿದ್ದರೆ, ಕಳೆದ ಇಡೀ ವರ್ಷ 941 ಪ್ರಕರಣ ದಾಖಲಾಗಿತ್ತು ಎಂದು ಸಾಂಕ್ರಾಮಿಕ ರೋಗಗಳ ರಾಷ್ಟ್ರೀಯ ಸಂಸ್ಥೆ ಮಾಹಿತಿ ನೀಡಿದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಗಂಟಲು ನೋವು ಮತ್ತು ಊತದ ಸಮಸ್ಯೆ ಕಂಡುಬರುತ್ತದೆ. ಆದರೆ ಕೆಲವು ರೀತಿಯ ಬ್ಯಾಕ್ಟೀರಿಯಾಗಳು ಕೈಕಾಲು ನೋವು, ಊತ, ಜ್ವರ, ಕಡಿಮೆ ರಕ್ತದೊತ್ತಡ, ಉಸಿರಾಟದ ತೊಂದರೆ, ಅಂಗಾಂಗ ವೈಫಲ್ಯ ಮತ್ತು ಸಾವಿಗೆ ಕಾರಣವಾಗುತ್ತದೆ.

50 ವರ್ಷ ಮೀರಿದವರು ಈ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ವರದಿ ಹೇಳಿದೆ. ಈ ಸೋಂಕಿನ ಪ್ರಕರಣ ಹೆಚ್ಚುತ್ತಿರುವ ಬಗ್ಗೆ 2022ರ ಅಂತ್ಯದಲ್ಲಿ ಕನಿಷ್ಟ 5 ಯುರೋಪಿಯನ್ ದೇಶಗಳು ವಿಶ್ವ ಆರೋಗ್ಯ ಸಂಘಟನೆ(ಡಬ್ಲ್ಯೂಎಚ್‍ಒ) ಗೆ ಮಾಹಿತಿ ನೀಡಿವೆ. ಕೋವಿಡ್ ನಿರ್ಬಂಧ ಅಂತ್ಯಗೊಳಿಸಿರುವುದು ಈ ಪ್ರಕರಣ ಹೆಚ್ಚಲು ಮುಖ್ಯ ಕಾರಣ ಎಂದು ಡಬ್ಲ್ಯೂಎಚ್‍ಒ ಹೇಳಿದೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News