ಕ್ಯೂಬಾ ಏಜೆಂಟಾಗಿ ಕಾರ್ಯನಿರ್ವಹಿಸುತ್ತಿದ್ದಅಮೆರಿಕದ ಮಾಜಿ ರಾಯಭಾರಿ ಬಂಧನ
Update: 2023-12-04 17:42 GMT
ವಾಷಿಂಗ್ಟನ್: ಕ್ಯೂಬಾದ ಏಜೆಂಟ್ ಆಗಿ ರಹಸ್ಯವಾಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪದಲ್ಲಿ ಅಮೆರಿಕದ ಮಾಜಿ ರಾಜತಾಂತ್ರಿಕ ಅಧಿಕಾರಿ ಮ್ಯಾನುವೆಲ್ ರೋಚಾರನ್ನು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್(ಎಫ್ಬಿಐ) ಬಂಧಿಸಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಅಸೋಸಿಯೇಟೆಡ್ ಪ್ರೆಸ್ ಸುದ್ಧಿಸಂಸ್ಥೆ ವರದಿ ಮಾಡಿದೆ.
ಬೊಲಿವಿಯಾಕ್ಕೆ ಅಮೆರಿಕದ ಮಾಜಿ ರಾಯಭಾರಿಯಾಗಿದ್ದ ರೋಚಾ ಅಮೆರಿಕದ ಒಳಗೆ ಕ್ಯೂಬಾ ಸರಕಾರದ ಹಿತಾಸಕ್ತಿ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬೇರೊಂದು ದೇಶದ ಸರಕಾರದ ಪರ ಕಾರ್ಯನಿರ್ವಹಿಸುವವರು (ಲಾಬಿ ನಡೆಸುವವರು) ಅಮೆರಿಕದ ಕಾನೂನಿನ ಪ್ರಕಾರ ನ್ಯಾಯ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಆದರೆ ಈ ಕಾನೂನನ್ನು ರೋಚಾ ಉಲ್ಲಂಘಿಸಿದ್ದಾರೆ ಎಂದು ಎಫ್ಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.