ಗಾಝಾದಲ್ಲಿ ಇಸ್ರೇಲ್ ಟ್ಯಾಂಕ್ ಪಡೆಯ ‘ಪ್ರಮಾದವಶಾತ್’ ದಾಳಿ | ಐವರು ಇಸ್ರೇಲಿ ಸೈನಿಕರ ಬಲಿ

Update: 2024-05-16 16:39 GMT

ಸಾಂದರ್ಭಿಕ ಚಿತ್ರ  PC : NDTV

ಜೆರುಸಲೇಂ : ಹಮಾಸ್ ಹಾಗೂ ಇಸ್ರೇಲ್ ಸೇನೆ ನಡುವೆ ಭೀಕರ ಕಾಳಗಕ್ಕೆ ಸಾಕ್ಷಿಯಾಗಿರುವ ಗಾಝಾದಲ್ಲಿ ಇಸ್ರೇಲ್ ಮಿಲಿಟರಿ ಪ್ರಮಾದವಶಾತ್ ನಡೆಸಿದ ಗುಂಡಿನ ದಾಳಿಯಲ್ಲಿ ಐವರು ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ.

ಉತ್ತರ ಗಾಝಾ ಪಟ್ಟಿಯ ಜಬಾಲಿಯಾ ನಿರಾಶ್ರಿತ ಶಿಬಿರದ ಸಮೀಪ ಇಸ್ರೇಲಿ ಸೈನಿಕರು ಸಾವ್ನನಪ್ಪಿದ್ದಾರೆಂದು ಇಸ್ರೇಲ್‌ನ ಸೇನಾ ಹೇಳಿಕೆಯೊಂದು ತಿಳಿಸಿದೆ. ಇದರೊಂದಿಗೆ ಅಕ್ಟೋಬರ್ 27ರಂದು ಇಸ್ರೇಲ್ , ಗಾಝಾ ಪಟ್ಟಿಯ ಮೇಲೆ ಸೇನಾ ಕಾರ್ಯಾಚರಣೆ ಆರಂಭಿಸಿದಾಗಿನಿಂದ ಸಾವನ್ನಪ್ಪಿದ ಇಸ್ರೇಲಿ ಸೈನಿಕರ ಸಂಖ್ಯೆ 278ಕ್ಕೇರಿದೆ.

ನಮ್ಮ ಪಡೆಗಳೇ ನಡೆಸಿದ ಗುಂಡಿನ ದಾಳಿಯ ಪರಿಣಾಮವಾಗಿ, ಬುಧವಾರ ರಾತ್ರಿ 202ನೇ ಪ್ಯಾರಾಟ್ರೂಪರ್ ಬೆಟಾಲಿಯನ್‌ನ ಐವರು ಸೈನಿಕರು ಸಾವನ್ನಪ್ಪಿದ್ದಾರೆಂದು ಮಿಲಿಟರಿ ಹೇಳಿಕೆಯೊಂದು ತಿಳಿಸಿದೆ.

ಇಸ್ರೇಲಿ ಬೆಟಾಲಿಯನ್‌ನ ಉಪಕಮಾಂಡರ್ ಬಳಸುತ್ತಿದ್ದ ಮನೆಯೊಂದರ ಕಿಟಕಿಗಳಿಂದ ಬಂದೂಕಿನ ನಳಿಕೆಯೊಂದು ಹೊರಬಂದಿರುವುದನ್ನು ಕಂಡ ತಪ್ಪಾಗಿ ಭಾವಿಸಿದ ಇಸ್ರೇಲ್‌ನ ಟ್ಯಾಂಕ್ ಫೈಟರ್ ಯೋಧರು, ಆ ಕಟ್ಟಡದ ಮೇಲೆ ಗುಂಡಿನ ದಾಳಿ ನಡೆಸಿದರು ಎಂದು ಹೇಳಿಕೆ ತಿಳಿಸಿದೆ.

ಈ ಮಧ್ಯೆ ಉತ್ತರ ಗಾಝಾದ ಜಬಾಲಿಯಾ ನಿರಾಶ್ರಿತ ಶಿಬಿರದಲ್ಲಿ ಹಾಗೂ ಕೇಂದ್ರ ನುಸೈರತ್ ಶಿಬಿರ ಪ್ರದೇಶಗಳಲ್ಲಿ ಇಸ್ರೇಲ್ ಸೇನೆ ಗುರುವಾರ ಭಾರೀ ಬಾಂಬ್ ದಾಳಿಗಳನ್ನು ನಡೆಸಿರುವುದಾಗಿ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News