ಹಮಾಸ್ ಮುಖ್ಯಸ್ಥ ನ ಹತ್ಯೆ | ಕದನ ವಿರಾಮ ಮಾತುಕತೆಗೆ ಹಿನ್ನಡೆ: ಖತರ್ ಕಳವಳ

Update: 2024-07-31 16:15 GMT

Photo: x.com/agusantonetti

ದೋಹಾ : ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆಯು ಗಾಝಾದಲ್ಲಿ ಕದನ ವಿರಾಮ ರೂಪಿಸುವ ಪ್ರಯತ್ನಗಳಿಗೆ ಧಕ್ಕೆ ತರಬಹುದು ಎಂದು ಕದನ ವಿರಾಮ ಮಾತುಕತೆಯಲ್ಲಿ ಮಧ್ಯವರ್ತಿಗಳಾದ ಖತರ್ ಮತ್ತು ಈಜಿಪ್ಟ್ ಕಳವಳ ವ್ಯಕ್ತಪಡಿಸಿದೆ.

` ಮಾತುಕತೆಗಳು ಮುಂದುವರಿದಿರುವಾಗ ರಾಜಕೀಯ ಹತ್ಯೆಗಳು ಮತ್ತು ಗಾಝಾದಲ್ಲಿ ನಾಗರಿಕರನ್ನು ಗುರಿಯಾಗಿಸಿದ ಹತ್ಯೆಗಳು ನಮ್ಮಲ್ಲಿ ಒಂದು ಪ್ರಶ್ನೆಯನ್ನು ಮೂಡಿಸುತ್ತದೆ. ಸಂಧಾನ ಮಾತುಕತೆಯ ಎದುರು ಬದುರು ಕುಳಿತಿರುವ ಇಬ್ಬರಲ್ಲಿ ಒಬ್ಬರು ಮತ್ತೊಬ್ಬರನ್ನು ಹತ್ಯೆ ಮಾಡಿದರೆ ಸಂಧಾನ ಹೇಗೆ ಯಶಸ್ವಿಯಾಗುತ್ತದೆ? ಮಾತುಕತೆಯಲ್ಲಿ ಗಂಭೀರವಾಗಿ ಪಾಲ್ಗೊಳ್ಳುವವರು ಮತ್ತು ಮಾನವ ಜೀವನದ ಕಡೆಗಣನೆಯ ವಿರುದ್ಧ ಜಾಗತಿಕ ನಿಲುವು ಶಾಂತಿ ಸ್ಥಾಪನೆಗೆ ಅಗತ್ಯವಾಗಿದೆ' ಎಂದು ಖತರ್ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ ಥಾನಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಳೆದ ಕೆಲ ದಿನಗಳಿಂದ ಇಸ್ರೇಲ್ ಅನುಸರಿಸುತ್ತಿರುವ ಅಪಾಯಕಾರಿ ಉಲ್ಬಣ ನೀತಿಯು ಗಾಝಾದಲ್ಲಿನ ಹೋರಾಟವನ್ನು ಅಂತ್ಯಗೊಳಿಸುವ ಪ್ರಯತ್ನಗಳನ್ನು ದುರ್ಬಲಗೊಳಿಸಿದೆ ಎಂದು ಈಜಿಪ್ಟ್ ನ ವಿದೇಶಾಂಗ ಇಲಾಖೆ ಹೇಳಿದೆ. 

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News