ನಿರಾಶ್ರಿತರ ಶಿಬಿರದ ಮೇಲಿನ ಬಾಂಬ್ ದಾಳಿಯಲ್ಲಿ ಹಮಾಸ್ ಕಮಾಂಡರ್ ಹತ್ಯೆ: ಇಸ್ರೇಲ್

Update: 2023-11-01 02:45 GMT

Photo: PTI

ಜೆರುಸಲೇಂ: ಹಮಾಸ್ ಸಂಘಟನೆಯ ಕೇಂದ್ರೀಯ ಜಬಾಲಿಯಾ ಬೆಟಾಲಿಯನ್ ನ ಕಮಾಂಡರ್ ಇಬ್ರಾಹಿಂ ಬಿಯಾರಿ ಅವರನ್ನು ಗಾಝಾಪಟ್ಟಿಯ ಜಬಲ್ಯಾ ನಿರಾಶ್ರಿತರ ಶಿಬಿರದ ಮೇಲೆ ನಡೆಸಿದ ಬಾಂಬ್ ದಾಳಿಯಲ್ಲಿ ಹತ್ಯೆ ಮಾಡಿರುವುದಾಗಿ ಇಸ್ರೇಲ್ ನ ರಕ್ಷಣಾ ಪಡೆಗಳು ದೃಢಪಡಿಸಿವೆ.

ಆದರೆ, ಈ ಶಿಬಿರದಲ್ಲಿ ಸಂಘಟನೆಯ ಮುಖಂಡರು ಇದ್ದರು ಎಂಬ ವರದಿಗಳನ್ನು ಹಮಾಸ್ ವಕ್ತಾರ ಹಝೀಮ್ ಕಾಸಿಂ ಅಲ್ಲಗಳೆದಿದ್ದಾರೆ.

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಲು 'ನುಕ್ಭಾ' ಹೋರಾಟಗಾರರನ್ನು ಇಸ್ರೇಲ್ ಗೆ ಕಳುಹಿಸಿಕೊಡುವಲ್ಲಿ ಬಿಯಾರಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಐಡಿಎಫ್ ಹೇಳಿದೆ.

ಇದಕ್ಕೂ ಮುನ್ನ ಐಡಿಎಫ್ ವಕ್ತಾರ ಲೆಫ್ಟಿನೆಂಟ್ ಕರ್ನಲ್ ರಿಚರ್ಡ್ ಹೆಟ್ಚ್ ಹೇಳಿಕೆ ನೀಡಿ, ಪರಿಹಾರ ಶಿಬಿರದ ಸುತ್ತಮುತ್ತ ಅತ್ಯಂತ ಹಿರಿಯ ಹಮಾಸ್ ಕಮಾಂಡರ್ ಅವರನ್ನು ಐಡಿಎಫ್ ಗುರಿ ಮಾಡಿದೆ ಎಂದು ಪ್ರಕಟಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News