ಕೆಂಪು ಸಮುದ್ರದ ಬಳಿ ಅಮೆರಿಕದ ಸಮರನೌಕೆಯತ್ತ ಹೌದಿಗಳಿಂದ ಕ್ಷಿಪಣಿ ದಾಳಿ

Update: 2024-11-13 16:08 GMT

ಸಾಂದರ್ಭಿಕ ಚಿತ್ರ | PC : PTI

ವಾಷಿಂಗ್ಟನ್: ಕೆಂಪು ಸಮುದ್ರದ ಬಳಿ ಬಾಬ್ ಎಲ್-ಮಂದೇಬ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಅಮೆರಿಕದ ಎರಡು ಸಮರನೌಕೆಗಳನ್ನು ಗುರಿಯಾಗಿಸಿ ಯೆಮನ್‌ ನ ಹೌದಿಗಳು ಡ್ರೋನ್ ಹಾಗೂ ಕ್ಷಿಪಣಿಗಳಿಂದ ದಾಳಿ ನಡೆಸಿದ್ದಾರೆ. ಆದರೆ ದಾಳಿ ಯಶಸ್ವಿಯಾಗಿಲ್ಲ ಎಂದು ಅಮೆರಿಕದ ರಕ್ಷಣಾ ಇಲಾಖೆ ಹೇಳಿದೆ.

ಕೆಂಪು ಸಮುದ್ರದ ಬಳಿ ಬಾಬ್ ಎಲ್- ಮಂದೇಬ್ ಜಲಸಂಧಿಯ ಮೂಲಕ ಸಾಗುತ್ತಿದ್ದ ಅಮೆರಿಕದ ಸಮರ ನೌಕೆಗಳಾದ ಯುಎಸ್‍ಎಸ್ ಸ್ಟಾಕ್‍ಡೇಲ್ ಮತ್ತು ಯುಎಸ್‍ಎಸ್ ಸ್ಪ್ರೂನ್ಸ್‍ ಗಳನ್ನು ಗುರಿಯಾಗಿಸಿ ಇರಾನ್ ಬೆಂಬಲಿತ ಹೌದಿಗಳು ಕನಿಷ್ಠ 8 ಡ್ರೋನ್‍ಗಳು, ಐದು ಹಡಗು ಧ್ವಂಸಕ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಹಾಗೂ ಮೂರು ಹಡಗು ಧ್ವಂಸಕ ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿವೆ. ಆದರೆ ಇವು ಗುರಿ ತಲುಪಿಲ್ಲ. ಯಾವುದೇ ನಾಶ-ನಷ್ಟ ಅಥವಾ ಸಾವು-ನೋವು ಸಂಭವಿಸಿಲ್ಲ ಎಂದು ಅಮೆರಿಕ ರಕ್ಷಣಾ ಇಲಾಖೆಯ ಪತ್ರಿಕಾ ಕಾರ್ಯದರ್ಶಿ ಮೇ| ಜ| ಪ್ಯಾಟ್ ರೈಡರ್ ಹೇಳಿದ್ದಾರೆ.

ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಯ ನಡುವಿನ ಕಿರಿದಾದ ಸಮುದ್ರ ಮಾರ್ಗವಾಗಿರುವ ಮುಂದೇಬ್ ಜಲಸಂಧಿಯ ಮೂಲಕ ಪ್ರತೀ ವರ್ಷ ಸರಾಸರಿ 1 ಲಕ್ಷ ಕೋಟಿ ಡಾಲರ್ ಮೌಲ್ಯದ ಸರಕುಗಳು ಸಾಗಾಟವಾಗುತ್ತಿದೆ.

ಕೆಂಪು ಸಮುದ್ರದ ಬಳಿ ಅಮೆರಿಕದ ಸಮರ ನೌಕೆಗಳ ಮೇಲೆ ದಾಳಿ ನಡೆಸಿರುವುದನ್ನು ಹೌದಿಗಳು ದೃಢಪಡಿಸಿದ್ದು ಗಾಝಾ ಮತ್ತು ಲೆಬನಾನ್‌ ನಲ್ಲಿ ಇಸ್ರೇಲ್‍ ನ ದಾಳಿ ನಿಲ್ಲುವವರೆಗೆ ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿ ಮುಂದುವರಿಯಲಿದೆ ಎಂದಿದೆ.

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News