ಫ್ಲೋರಿಡಾ | ಚಂಡಮಾರುತದಿಂದ ಮೃತರ ಸಂಖ್ಯೆ 16ಕ್ಕೆ ಏರಿಕೆ
Update: 2024-10-12 14:49 GMT
ನ್ಯೂಯಾರ್ಕ್ : ಅಮೆರಿಕದ ಫ್ಲೋರಿಡಾ ರಾಜ್ಯದಲ್ಲಿ ಮಿಲ್ಟನ್ ಚಂಡಮಾರುತದಿಂದ ವ್ಯಾಪಕ ನಾಶ ನಷ್ಟ ಸಂಭವಿಸಿದ್ದು ಕನಿಷ್ಠ 16 ಮಂದಿ ಮೃತಪಟ್ಟಿದ್ದು ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚಂಡಮಾರುತದ ಅಬ್ಬರಕ್ಕೆ ನಲುಗಿರುವ ಉತ್ತರ ಫ್ಲೋರಿಡಾದಲ್ಲಿ ಬಹುತೇಕ ಪ್ರದೇಶ ಜಲಾವೃತಗೊಂಡಿದೆ. ಸೈಂಟ್ ಲೂಯಿಸ್ ಪ್ರಾಂತದಲ್ಲಿ ಕನಿಷ್ಠ 6 ಮಂದಿ, ವೊಲುಸಿಯಾ ಪ್ರಾಂತದಲ್ಲಿ 4, ಪಿನೆಲಾಸ್ ಪ್ರಾಂತದಲ್ಲಿ ಇಬ್ಬರು, ಹಿಲ್ಸ್‍ಬೊರೊ, ಪೋಕ್, ಆರೆಂಜ್ ಮತ್ತು ಸಿಟ್ರಸ್ ಪ್ರಾಂತದಲ್ಲಿ ತಲಾ ಒಬ್ಬರು ಮೃತಪಟ್ಟಿರುವುದು ದೃಢಪಟ್ಟಿದೆ. ಟ್ಯಾಂಪಾ ಬೇಸ್‍ಬಾಲ್ ಕ್ರೀಡಾಂಗಣದ ಛಾವಣಿ ಹಾರಿಹೋಗಿದೆ ಎಂದು ವರದಿಯಾಗಿದೆ.
ಚಂಡಮಾರುತದಿಂದ 50 ಶತಕೋಟಿ ಡಾಲರ್ ನಷ್ಟ ಅಂದಾಜಿಸಲಾಗಿದ್ದು ಹೆಚ್ಚಿನ ನಷ್ಟಕ್ಕೆ ಒಳಗಾಗಿರುವ ಸಣ್ಣ ವ್ಯಾಪಾರ, ಉದ್ಯಮಗಳಿಗೆ ತುರ್ತು ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಅಧ್ಯಕ್ಷ ಜೋ ಬೈಡನ್ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.