ಅಮೆರಿಕದ ಜೊತೆ ಪರೋಕ್ಷ ಮಾತುಕತೆ ಸ್ಥಗಿತ : ಇರಾನ್

Update: 2024-10-15 16:52 GMT

ಟೆಹ್ರಾನ್ : ಪ್ರಾದೇಶಿಕ ಉದ್ವಿಗ್ನತೆ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಅಮೆರಿಕದ ಜತೆಗಿನ ಪರೋಕ್ಷ ಮಾತುಕತೆಯನ್ನು ಸ್ಥಗಿತಗೊಳಿಸಿರುವುದಾಗಿ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.

`ಈಗಿನ ಸಂದರ್ಭದಲ್ಲಿ, ಪ್ರಸ್ತುತ ಬಿಕ್ಕಟ್ಟಿನಿಂದ ನಾವು ಹೊರಬರುವವರೆಗೆ ಇಂತಹ ಮಾತುಕತೆಗೆ ಯಾವುದೇ ಆಧಾರವಿಲ್ಲ. ನಾವು ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಲು ಬಯಸುವುದಿಲ್ಲ. ರಾಜತಾಂತ್ರಿಕತೆಯ ಮಹತ್ವ ನಮಗೆ ತಿಳಿದಿದೆ. ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ. ನಾವು ಯುದ್ಧ ಅಥವಾ ಸಂಘರ್ಷವನ್ನು ಬಯಸುತ್ತಿಲ್ಲ. ಆದರೆ ಯುದ್ಧ ಎದುರಾದರೆ ಸಂಪೂರ್ಣ ಸಿದ್ಧವಾಗಿದ್ದೇವೆ' ಎಂದವರು ಹೇಳಿದ್ದಾರೆ.

ಇರಾನ್ ಮತ್ತು ಅಮೆರಿಕ ನಡುವಿನ ಪರೋಕ್ಷ ಮಾತುಕತೆಗೆ ಒಮಾನ್ ಮಧ್ಯಸ್ಥಿಕೆ ವಹಿಸಿದೆ. ಪ್ರಾದೇಶಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿಯೂ ಒಮಾನ್ ಯಾವತ್ತೂ ಉತ್ತಮ ಕೊಡುಗೆ ನೀಡಿದೆ ಎಂದು ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News