ಇಸ್ಲಾಮಾಬಾದ್‍ ಗೆ ಆಗಮಿಸಿದ ಎಸ್. ಜೈಶಂಕರ್

Update: 2024-10-15 16:33 GMT

ಎಸ್. ಜೈಶಂಕರ್ | PTI

ಇಸ್ಲಾಮಾಬಾದ್: ಶಾಂಘೈ ಸಹಕಾರ ಸಂಘಟನೆಯ ಸಚಿವರ ಮಟ್ಟದ ಸಭೆಯಲ್ಲಿ ಪಾಲ್ಗೊಳ್ಳಲು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಂಗಳವಾರ ಮಧ್ಯಾಹ್ನ ಇಸ್ಲಾಮಾಬಾದ್‍ ಗೆ ಆಗಮಿಸಿದರು.

ಇದು 9 ವರ್ಷಗಳ ಬಳಿಕ ಭಾರತದ ವಿದೇಶಾಂಗ ಸಚಿವರು ಪಾಕಿಸ್ತಾನಕ್ಕೆ ನೀಡಿರುವ ಭೇಟಿಯಾಗಿದೆ. ಇಸ್ಲಾಮಾಬಾದ್ನರ ಹೊರವಲಯದಲ್ಲಿರುವ ನೂರ್ಖಾರನ್ ವಾಯುನೆಲೆಯಲ್ಲಿ ಬಂದಿಳಿದ ಜೈಶಂಕರ್ರಂನ್ನು ಪಾಕಿಸ್ತಾನದ ವಿದೇಶಾಂಗ ವ್ಯವಹಾರ ಇಲಾಖೆಯಲ್ಲಿ ದಕ್ಷಿಣ ಏಶ್ಯಾದ ಮಹಾನಿರ್ದೇಶಕ ಇಲ್ಯಾಸ್ ಮೆಹ್ಮೂದ್ ನಿಝಾಮಿ ಹಾಗೂ ಇತರ ಅಧಿಕಾರಿಗಳು ಸ್ವಾಗತಿಸಿದರು.

ಬುಧವಾರ ಪಾಕಿಸ್ತಾನ ಪ್ರಧಾನಿ ಶಹಬಾಝ್ ಷರೀಫ್ ಅಧ್ಯಕ್ಷತೆಯಲ್ಲಿ ನಡೆಯುವ ಸರ್ಕಾರದ ಮುಖ್ಯಸ್ಥರ ಪರಿಷತ್ತು(ಸಿಚ್ಜಿನ) ಸಭೆಯಲ್ಲಿ ಜೈಶಂಕರ್ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಎಸ್ಸಿರಒ ಸಿಎಚ್ಜಿದ ಸಭೆಯು ವಾರ್ಷಿಕವಾಗಿ ನಡೆಯುತ್ತದೆ ಮತ್ತು ಸಂಸ್ಥೆಯ ವ್ಯಾಪಾರ ಮತ್ತು ಆರ್ಥಿಕ ಕಾರ್ಯಸೂಚಿಯ ಮೇಲೆ ಕೇಂದ್ರೀಕರಿಸುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News